ಮೈಸೂರು

ಕೋವಿಡ್-19 ನಿಯಂತ್ರಣ ಸಂಬಂಧ ಜನ ಜಾಗೃತಿ ಕಾರ್ಯಕ್ರಮ

ಮೈಸೂರು,ಏ.6:- ಕೋವಿಡ್-19 ನಿಯಂತ್ರಣ ಸಂಬಂಧ ಮೈಸೂರು ನಗರ ಪೊಲೀಸರು ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಇಂದು ನರಸಿಂಹರಾಜ ವಿಭಾಗದ
ಎ.ಸಿ.ಪಿ. ಶಿವಶಂಕರ್ ಎಂ ಅವರ ನೇತೃತ್ವದಲ್ಲಿ ಬಿ.ಆರ್.ಎಂ ಆಸ್ಪತ್ರೆಯವರ ಸಹಯೋಗದೊಂದಿಗೆ ನರಸಿಂಹರಾಜ ವಿಭಾಗದ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ ಪೆಕ್ಟರ್ ಹಾಗೂ ಇತರೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಜಯಲಕ್ಷ್ಮೀಪುರಂ ಮತ್ತು ವಿ.ವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ
ಕಾಳಿದಾಸ ರಸ್ತೆ ಮತ್ತು ಗೋಕುಲಂ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ಕೋವಿಡ್-19 ನಿಯಂತ್ರಣದ ಸಂಬಂಧ ಅನುಸರಿಸಬೇಕಾದ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಜರ್ ಬಳಕೆ ಮತ್ತು ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದ್ದು, ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಗಿರುತ್ತದೆ. ಮಾಸ್ಕ್ ಬಳಕೆ ಮಾಡದಿದ್ದಲ್ಲಿ ಸ್ಥಳದಂಡವನ್ನು ಹಾಕುವುದಾಗಿ ತಿಳುವಳಿಕೆ ನೀಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: