ಮೈಸೂರು

  ರಾಷ್ಟ್ರೀಯವಾದಿ ಚಿಂತನೆಗಳೇ ಬಿಜೆಪಿ ಪಕ್ಷ ಬಲಗೊಳ್ಳಲು ಪ್ರಮುಖ ಕಾರಣ :  ಗೆಜ್ಜಗಳ್ಳಿ ಮಹೇಶ್

ಮೈಸೂರು,ಏ.7:- 14 ಕೋಟಿ ಸದಸ್ಯತ್ವವನ್ನು ಹೊಂದಿರುವ ಬಿಜೆಪಿ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪಕ್ಷವಾಗಿದ್ದು .ಪಕ್ಷ ಹೊಂದಿರುವ ರಾಷ್ಟ್ರೀಯವಾದಿ ಚಿಂತನೆಗಳೇ ಪಕ್ಷ ಬಲಗೊಳ್ಳಲು ಪ್ರಮುಖ ಕಾರಣ. ಪಕ್ಷದ ಕಾರ್ಯಕರ್ತರು ಪಕ್ಷದ ಸೈದ್ಧಾಂತಿಕ ನಿಲುವುಗಳಿಗೆ ಬದ್ಧರಾಗಿ ಇನ್ನಷ್ಟು ಪಕ್ಷ ಸಂಘಟನೆಗೆ ಒತ್ತು ಕೊಡಬೇಕೆಂದು  ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ಗೆಜ್ಜಗಳ್ಳಿ ಮಹೇಶ್ ತಿಳಿಸಿದರು.

ಬಿಜೆಪಿ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಬಿಜೆಪಿಯ  ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವತಿಯಿಂದ ಜಯಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸತೀಶ್ ಹಾಗೂ ಇನ್ನಿತರ ಪದಾಧಿಕಾರಿ ಮನೆಯಲ್ಲಿ ಪಕ್ಷದ ಧ್ವಜವನ್ನು ಹಾರಿಸುವ ಮೂಲಕ ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು  ಪಕ್ಷದ ಬೆಳವಣಿಗೆ ಹಿಂದೆ ಶ್ಯಾಮ್ ಪ್ರಸಾದ್ ಮುಖರ್ಜಿ ,ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಅವಿರತ ಶ್ರಮ ಅಡಗಿದೆ ಎಂದರು.

ಲೋಕಸಭೆಯಲ್ಲಿ ಕೇವಲ 3ಸಂಸದರನ್ನು ಹೊಂದಿದ್ದ ಪಕ್ಷ ಇಂದು 300ಕ್ಕೂ ಹೆಚ್ಚು ಸಂಸದರನ್ನು ಹೊಂದಿದ್ದು,ದೇಶದ ಬಗ್ಗೆ ಬಿಜೆಪಿಗೆ ಇರುವ ಸೈದ್ಧಾಂತಿಕ ಬದ್ಧತೆ ಇದಕ್ಕೆ ಕಾರಣವಾಗಿದೆ. 70ವರುಷಗಳಲ್ಲಿ ಕಾಂಗ್ರೆಸ್ ಮಾಡಿದ ಸಾಧನೆಯನ್ನು ಬಿಜೆಪಿ ನೇತೃತ್ವದ ಮೋದಿ ಸರಕಾರ ಕೇವಲ 7ವರ್ಷದಲ್ಲಿ ಮಾಡಿದೆ. ಇಡೀ ವಿಶ್ವವೇ ಮೆಚ್ಚುವ ಆಡಳಿತವನ್ನು ಮೋದಿ ನೀಡುತ್ತಿದ್ದಾರೆ .ಜಾಗತಿಕವಾಗಿ ಭಾರತ ಬಲಿಷ್ಠ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಇದೇ ಸಂದರ್ಭದಲ್ಲಿ  ಬಿಜೆಪಿ ಹಿರಿಯ ಕಾರ್ಯಕರ್ತರಾದ ಗೋಪಾಲ್ ರಾವ್ ,ಶ್ರೀನಿವಾಸ್ ,ಕ್ಷೇತ್ರದ ಉಪಾಧ್ಯಕ್ಷರಾದ ವೃಷಭೇಂದ್ರ ,ಶಿವ ಮಲ್ಲಿಕಾರ್ಜುನ ,ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸತೀಶ್ ,ಯುವಮೋರ್ಚಾ ಅಧ್ಯಕ್ಷರಾದ ಚೇತನ್ ಕುಮಾರ್ ,ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇವಣ್ಣ ,ಶ್ರೀರಾಂಪುರ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಜಯಸಿಂಹ ,ಪ್ರಸನ್ನ ಮಲ್ಲಿಕಾರ್ಜುನ, ಚಂದ್ರು, ಮಣಿಕಂಠ ,ಮನು    ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: