ಮೈಸೂರು

ವಾಲ್ಮಿಕಿ ದಲಿತರ ಕುರಿತು ಬರೆದಿದ್ದರೆ ಸುಧಾರಣೆಯಾಗುತ್ತಿತ್ತು : ಪ್ರೊ.ದಯಾನಂದ ಮಾನೆ ಬೇಸರ

ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕಾಲೇಜು ಪಠ್ಯೇತರ ಚಟುವಟಿಕೆಗಳ ಸಮಿತಿ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆಯನ್ನು  ಆಚರಿಸಲಾಯಿತು.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಮಾತನಾಡಿ  ಮಹಾಕವಿ ವಾಲ್ಮಿಕಿ ರಾಮಾಯಣದಲ್ಲಿ ದಲಿತರ ಕುರಿತು ಒಂದು ಸಾಲನ್ನೂ ಬರೆಯದಿರುವುದು ದುರದೃಷ್ಟಕರ. ಅವರೇನಾದರೂ ಬರೆದಿರುತ್ತಿದ್ದರೆ ಸಮಾಜದಲ್ಲಿ ದಲಿತರ ಸುಧಾರಣೆಗಳೇನಾದರೂ ಆಗುತ್ತಿದ್ದವೇನೋ ಎಂದು ಹೇಳಿದರು. ದೇಶದ ಸಂಸತ್ತಿನಲ್ಲಿ 150ಕ್ಕೂ ಹೆಚ್ಚು ಸಂಸದರು ಹಾಗೂ 800ಕ್ಕೂ ಹೆಚ್ಚು ಶಾಸಕರು ದಲಿತ ಸಮುದಾಯಕ್ಕೆ ಸೇರಿದವರಿದ್ದು ಅವರಿಂದ ದಲಿತಪರ ಹೋರಾಟಗಳು ನಡೆಯದೇ ಕುರ್ಚಿ ಮತ್ತು ಹಣದ ಹಿಂದೆ ಬಿದ್ದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಸಿ.ಪಿ.ಸುನೀತ, ಕಾಲೇಜು ಆಡಳಿತಾಧಿಕಾರಿ ಡಾ.ಎಲ್.ಲಿಂಬ್ಯಾನಾಯಕ್, ಪಠ್ಯೇತರ ಚಟುವಟಿಕೆ ಸಂಚಾಲಕ ಡಾ.ಎಸ್.ಟಿ.ರಾಮಚಂದ್ರ ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: