ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಕೊರೋನಾ ಹಿನ್ನೆಲೆ :  ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುತ್ತಿಲ್ಲ ಉತ್ತರ ಕೊರಿಯಾ  

ದೇಶ(ನವದೆಹಲಿ)ಏ.7:- ಕೊರೋನಾ ಸಾಂಕ್ರಾಮಿಕ ರೋಗವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಉತ್ತರ ಕೊರಿಯಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ.

ಟೋಕಿಯೊದಲ್ಲಿ ಒಲಿಂಪಿಕ್ ಕ್ರೀಡಾಕೂಟ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ. ಕ್ರೀಡಾಕೂಟದ ಮಹಾಕುಂಭ ಒಲಿಂಪಿಕ್ಸ್ ಕಳೆದ ವರ್ಷ  2020 ರಲ್ಲಿ ನಡೆಯಬೇಕಿತ್ತು, ಆದರೆ ಕೊರೋನಾ ಸೋಂಕಿನಿಂದಾಗಿ ಅದನ್ನು ಮುಂದೂಡಲಾಯಿತು. ಎರಡನೇ ಮಹಾಯುದ್ಧದ ನಂತರ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಂತಹ ಪ್ರಮುಖ ಕ್ರೀಡಾಕೂಟವನ್ನು ಮುಂದೂಡಲಾಯಿತು.

ಟೋಕಿಯೊದಲ್ಲಿ ನಡೆಯಲಿರುವ 32 ನೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಉತ್ತರ ಕೊರಿಯಾ ಭಾಗವಹಿಸುವುದಿಲ್ಲ ಎಂದು ಉತ್ತರ ಕೊರಿಯಾ ತನ್ನ ಕ್ರೀಡಾ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಕಟಿಸಿದೆ. ಕೊರೋನಾದಿಂದ ಉದ್ಭವಿಸುವ ಈ ಜಾಗತಿಕ ಆರೋಗ್ಯ ಬಿಕ್ಕಟ್ಟಿನಿಂದ ತನ್ನ ಆಟಗಾರರನ್ನು ರಕ್ಷಿಸಲು ಉತ್ತರ ಕೊರಿಯಾ ಬಯಸಿದೆ. ಉತ್ತರ ಕೊರಿಯಾದ ಈ ನಿರ್ಧಾರಕ್ಕೆ ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯ ವಿಷಾದ ವ್ಯಕ್ತಪಡಿಸಿದೆ. ಎರಡು ಕೊರಿಯಾಗಳ ನಡುವಿನ ಪರಸ್ಪರ ಸಂಬಂಧವನ್ನು ಬಲಪಡಿಸಲು ಟೋಕಿಯೊ ಒಲಿಂಪಿಕ್ಸ್ ಪರಿಣಾಮಕಾರಿಯಾಗಲಿದೆ ಎಂದು ಅವರು ಆಶಿಸಿದ್ದರು ಎಂದು ದಕ್ಷಿಣ ಕೊರಿಯಾ ಹೇಳಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: