ಮೈಸೂರು

ಜೈಭೀಮ್ ಜನ ಸ್ಪಂದನ ವೇದಿಕೆ ವತಿಯಿಂದ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ಆರೋಗ್ಯದ  ಕುರಿತು ಜಾಗೃತಿ

ಮೈಸೂರು,ಏ.7:- ಜೈಭೀಮ್ ಜನ ಸ್ಪಂದನ ವೇದಿಕೆ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಅಗ್ರಹಾರ ಮತ್ತು ಚಾಮುಂಡಿಪುರಂ ಸುತ್ತಮುತ್ತ ಇರುವಂತಹ  ನಾಗರಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ಆರೋಗ್ಯದ  ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.

ಜೈಭೀಮ್ ಜನ ಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು ಮಾತನಾಡಿ ಇಂದು ವಿಶ್ವ ಆರೋಗ್ಯ ದಿನಾಚರಣೆ ನಮ್ಮ ಆರೋಗ್ಯ ನಾವೇ  ಕಾಪಾಡಿಕೊಳ್ಳಬೇಕು.  ಮಹಾಮಾರಿ ಕೊರೋನಾ 2 ನೇ  ಅಲೆ ಹೆಚ್ಚಾಗುತ್ತಿದ್ದು ಜನರು ಹೆಚ್ಚು ಹೆಚ್ಚು ಜಾಗೃತರಾಗಿರಬೇಕು. ದಿನದಿಂದ ದಿನಕ್ಕೆ ಮಿತಿ ಮೀರುತ್ತಿರುವ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿ,ಮಾಸ್ಕ್ ಹಾಕದವರಿಗೆ ಉಚಿತ ಮಾಸ್ಕ್ ನೀಡಿ ಜನ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಕ್ರೂರಿ ಕೊರೊನಾ ಕರುನಾಡಿನಲ್ಲಿ ಅಬ್ಬರಿಸುತ್ತಿದೆ. ತನ್ನ ಮಾಯಾಜಾಲದ ಮೂಲಕ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿದೆ. ಅದರಲ್ಲೂ ರಾಜ್ಯವನ್ನು   ಬಿಟ್ಟು ಬಿಡದೆ ಕಾಡುತ್ತಿದ್ದು, ಸೋಂಕಿತರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ.  ಕರ್ನಾಟಕದಲ್ಲಿ ಈ ಮಟ್ಟಿಗೆ ಅಬ್ಬರಿಸುತ್ತಿದ್ದರೂ ನಮ್ಮ ಜನ ತಲೆಕೆಡಿಸಿಕೊಂಡಿಲ್ಲ. ಮಾಸ್ಕ್‌ಗಳನ್ನ ಹಾಕದೆ ಬೇಕಾ ಬಿಟ್ಟಿ ತಿರುಗಾಡುತ್ತಿದ್ದಾರೆ  ಎಂದು ಆತಂಕ ವ್ಯಕ್ತಪಡಿಸಿದರು

ಜಾಗೃತಿ ಕಾರ್ಯಕ್ರಮದಲ್ಲಿ ಜೈ ಭೀಮ್ ಜನ ಸ್ಪಂದನ ವೇದಿಕೆಯ ಅಧ್ಯಕ್ಷರಾದ ಚೇತನ್ ಕಾಂತರಾಜು,ಉಮೇಶ್ , ಶಂಕರ್, ಮೂರ್ತಿ, ಶ್ರೀಕಾಂತ್   ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: