ಕ್ರೀಡೆಪ್ರಮುಖ ಸುದ್ದಿ

ಆರ್ ಸಿಬಿ ಗೆ ಆಘಾತ : ಡೇನಿಯಲ್ ಸ್ಯಾಮ್ಸ್ ಗೆ ಕೊರೋನಾ ಸೋಂಕು

ದೇಶ(ನವದೆಹಲಿ)ಏ.7:-    ಐಪಿಎಲ್ ಪ್ರಾರಂಭವಾಗುವ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)   ದೊಡ್ಡ ಹಿನ್ನಡೆ ಅನುಭವಿಸಿದೆ.

ಆರ್‌ಸಿಬಿ ಆಟಗಾರ ಡೇನಿಯಲ್ ಸ್ಯಾಮ್ಸ್ ಗೆ ಕೊರೋನಾ ಸೋಂಕು ತಗುಲಿದೆ. ಆರ್‌ಸಿಬಿ ಓಪನರ್ ದೇವದತ್ ಪಡಿಕ್ಕಲ್ ನಂತರ ಕೊರೋನಾ ಸೋಂಕು ಹೊಂದಿದ ಎರಡನೇ ಆಟಗಾರ ಡೇನಿಯಲ್ ಸೈಮ್ಸ್ ಆಗಿದ್ದಾರೆ. ಕೊರೋನಾ ಸೋಂಕಿಗೆ ಒಳಗಾದ ನಂತರ ಅವರನ್ನು ಕ್ವಾರೆಂಟೈನ್ ಮಾಡಲಾಗಿದೆ. ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಡೇನಿಯಲ್ ಸೈಮ್ಸ್ ಕೊರೋನಾ ಪಾಸಿಟಿವ್ ಆಗಿರುವ ಬಗ್ಗೆ ಮಾಹಿತಿ ನೀಡಿದೆ. ಈ ಮೊದಲು ಅವರು ಹೋಟೆಲ್ ತಲುಪಿದಾಗ ಅವರನ್ನು ಪರೀಕ್ಷಿಸಲಾಗಿದ್ದು, ಈ ಸಮಯದಲ್ಲಿ ಪಾಸಿಟಿವ್ ವರದಿ ಬಂದಿದೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: