ಕ್ರೀಡೆಪ್ರಮುಖ ಸುದ್ದಿ

ಆರ್ ಸಿಬಿ ನಿರಾಳ : ದೇವದತ್ತ ಪಡಿಕಲ್ ಕೊರೋನಾ ವರದಿ ನೆಗೆಟಿವ್

ದೇಶ(ನವದೆಹಲಿ)ಏ.7:- ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇದೀಗ ನಿರಾಳವಾಗಿದೆ. ಕೊರೋನಾ ಸೋಂಕಿಗೆ ಒಳಗಾಗಿದ್ದ  ಓಪನರ್ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಅವರ ಎರಡನೇ ಕೊರೋನಾ ಪರೀಕ್ಷಾ ವರದಿ   ನೆಗೆಟಿವ್‌ ಎಂದು ಬಂದಿದೆ.

ಪಡಿಕ್ಕಲ್ ಅವರ  ಮಾರ್ಚ್ 22 ರ   ಕೊರೋನಾ ವರದಿ ಸಕಾರಾತ್ಮಕವಾಗಿತ್ತು. ದೇವದತ್ತ ಪಡಿಕ್ಕಲ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ಪರ ಆಡಿದ್ದಾರೆ.

ಈ ಕುರಿತು ಆರ್ ಸಿಬಿ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ದೇವದತ್ ಅವರ ಕೊರೋನಾ ವರದಿ ನೆಗೆಟಿವ್ ಬಂದಿದೆ. ಅವರು ಆರೋಗ್ಯವಾಗಿದ್ದಾರೆ. ಆರ್ ಸಿಬಿ ಅಭಿಮಾನಿಗಳಿಗಾಗಿ ದೇವದತ್ ಸಂದೇಶ ನೀಡಿದ್ದಾರೆ ಎಂದು ಬರೆದುಕೊಂಡಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: