ಪ್ರಮುಖ ಸುದ್ದಿಮನರಂಜನೆ

ನಟ ಅರ್ಮಾನ್ ಕೊಹ್ಲಿ ಕಿರಿಯ ಸಹೋದರ ರಜನೀಶ್ ನಿಧನ

ದೇಶ(ಮುಂಬೈ)ಏ.8:- ನಟ ಅರ್ಮಾನ್ ಕೊಹ್ಲಿಯ ಕಿರಿಯ ಸಹೋದರ ಪ್ರಸಿದ್ಧ ನಿರ್ಮಾಪಕ-ನಿರ್ದೇಶಕರಾಗಿದ್ದ ರಾಜ್‌ ಕುಮಾರ್ ಕೊಹ್ಲಿಯವರ ಪುತ್ರ ರಜನೀಶ್ ಕೊಹ್ಲಿ ಮುಂಬೈನಲ್ಲಿ ನಿಧನರಾದರು.
ಅವರಿಗೆ ಕೇವಲ 44 ವರ್ಷ ವಯಸ್ಸಾಗಿತ್ತು. ರಜನೀಶ್ ಕೊಹ್ಲಿ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದು ಕೊಹ್ಲಿ ಕುಟುಂಬಕ್ಕೆ ಆಪ್ತ ಮೂಲವೊಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಠಾತ್ ಅನಾರೋಗ್ಯದ ನಂತರ ರಜನೀಶ್ ಕೊಹ್ಲಿಯವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಜನೀಶ್ ದೈಹಿಕವಾಗಿ ಅಂಗವಿಕಲರಾಗಿದ್ದರು ಮತ್ತು ನಡೆಯಲು ಸಾಧ್ಯವಿರಲಿಲ್ಲ ಎಂಬುದು ಗಮನಾರ್ಹ.
ರಜನೀಶ್ ಎಲ್ಲಿಯಾದರೂ ಹೋಗಲು ಗಾಲಿಕುರ್ಚಿಯನ್ನು ಆಶ್ರಯಿಸಬೇಕಾಗಿತ್ತು ಮತ್ತು ಅಂತಹ ಪರಿಸ್ಥಿತಿಯಲ್ಲಿ, ಅವರು ಹೆಚ್ಚಾಗಿ ತಮ್ಮ ಮನೆಯಲ್ಲಿಯೇ ಕಳೆಯುತ್ತಿದ್ದರು. ರಜನೀಶ್ 14 ನೇ ವಯಸ್ಸಿನಲ್ಲಿ ಅಪಘಾತಕ್ಕೊಳಗಾದ ನಂತರ ದೈಹಿಕವಾಗಿ ದುರ್ಬಲರಾಗಿದ್ದರು ಎಂದು ಮೂಲವೊಂದು ತಿಳಿಸಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: