ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ಕಾವೇರಿ ಜೀವಜಲ ನಮಗಾಗಿ: ದಸರಾ ರಂಗೋಲಿ ಸ್ಪರ್ಧೆಗೆ ಚಾಲನೆ

img-20161001-wa0006-webಮೈಸೂರು ಅರಮನೆ ಎದುರು ಇರುವ ಕೋಟೆ ಆಂಜನೆಯ ಸ್ವಾಮಿ ದೇವಸ್ಥಾನದ ಮುಂಭಾಗ ಮಹಿಳೆಯರ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಏರ್ಪಡಿಸಲಾದ ರಂಗೋಲಿ ಸ್ಪರ್ಧೆಗೆ  ಶನಿವಾರ ಮುಂಜಾನೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಖುದ್ದು ರಂಗೋಲಿ ರಚಿಸುವ ಮೂಲಕ ಚಾಲನೆ ನೀಡಿದರು.

ಕಾವೇರಿ ನಮ್ಮವಳು,ಕಾವೇರಿ ಜೀವಜಲ ನಮಗಾಗಿ ನಮ್ಮ ನಾಡಿಗಾಗಿ, ಸಾಮರಸ್ಯದಿಂದ ಸಮಸ್ಯೆ ಬಗೆಹರಿಸಬೇಕು  ಎನ್ನುವ ಬರಹದ ಮೂಲಕ ಸ್ಪರ್ಧಿಗಳು ಕಾವೇರಿ ನೀರು ಹಂಚಿಕೆ ಕುರಿತು ಸಂದೇಶ ನೀಡಿದರು.  ಚುಕ್ಕಿ ರಂಗೋಲಿ, ಓಂ ಓಳಗಡೆ ಗಣಪತಿ ಸೇರಿದಂತೆ ವಿವಿಧ ರೀತಿಯ ರಂಗೋಲಿ ಬಿಡಿಸುವುದರಲ್ಲಿ ಮಹಿಳೆಯರು ಮಗ್ನರಾಗಿರುವುದು ಕಂಡು ಬಂತು.  ರಂಗೋಲಿಯಲ್ಲಿ ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಿರುವುದು ವಿಶೇಷವಾಗಿತ್ತು.  ಸ್ಪರ್ಧೆಯಲ್ಲಿ ಒಟ್ಟು 64 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು.

Leave a Reply

comments

Related Articles

error: