ಪ್ರಮುಖ ಸುದ್ದಿಮನರಂಜನೆ

ಕೊರೋನಾ ವ್ಯಾಕ್ಸಿನ್ ಹಾಕಿಸಿಕೊಂಡ ಬಾಲಿವುಡ್ ನಟ ಸೋನು ಸೂದ್

ದೇಶ(ಮುಂಬೈ),ಏ.8:- 47 ವರ್ಷದ ಬಾಲಿವುಡ್ ನಟ ಸೋನು ಸೂದ್ ಅವರು ಪಂಜಾಬ್‌ ನ ಅಮೃತಸರ ನಗರದ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ಪಡೆದಿದ್ದು, ನಂತರ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅದರ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ.
ಸೋನು ಸೂದ್ ಲಸಿಕೆಯ ಮೊದಲ ಪ್ರಮಾಣವನ್ನಷ್ಟೇ ತೆಗೆದುಕೊಂಡಿಲ್ಲ, ಲಸಿಕೆ ಪಡೆಯಲು ಸಾಮಾನ್ಯ ಜನರಿಗೆ ಅರಿವು ಮೂಡಿಸುವ ಅಭಿಯಾನವನ್ನೂ ಅವರು ಪ್ರಾರಂಭಿಸಿದ್ದಾರೆ.
ಸೋನು ಸೂದ್ ಅವರು ಭಾರತ-ಪಾಕಿಸ್ತಾನದ ಅತ್ತಾರಿ ಗಡಿಯಿಂದ ತಮ್ಮ ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸಿದರು, ಅಲ್ಲಿ ಅವರು ಸೈನಿಕರನ್ನು ಭೇಟಿಯಾದರು. ವಾಸ್ತವವಾಗಿ, ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ದೇಶಾದ್ಯಂತ ತೊಂದರೆಗೆ ಸಿಲುಕಿದ ಲಕ್ಷಾಂತರ ಕಾರ್ಮಿಕರನ್ನು ತಮ್ಮ ಮನೆಗಳಿಗೆ ಕಳುಹಿಸಲು ಸಹಾಯ ಮಾಡುವ ಮೂಲಕ ಪಾರಮ್ಯ ಮೆರೆದ ಸೋನು ಸೂದ್, ಕರೋನಾ ಲಸಿಕೆ ಪಡೆಯಲು ದೇಶದಾದ್ಯಂತ 4890 ಹಳ್ಳಿಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಪ್ರಾರಂಭಿಸಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: