
ಕ್ರೀಡೆಪ್ರಮುಖ ಸುದ್ದಿ
ಐಪಿಎಲ್ 2021 ಆರಂಭಕ್ಕೂ ಮೊದಲು ಚೀನಾದ ಕಂಪನಿ ವಿವೊದ ಬ್ರಾಂಡ್ ಅಂಬಾಸಿಡರ್ ಆದ ವಿರಾಟ್ ಕೊಹ್ಲಿ
ದೇಶ(ನವದೆಹಲಿ)ಏ.8:- ಚೀನಾದ ಸ್ಮಾರ್ಟ್ ಫೋನ್ ಕಂಪನಿ ವಿವೊ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ.
ವಿವೋ ಅವರ ಮುಂಬರುವ ಉತ್ಪನ್ನಗಳ ಬಿಡುಗಡೆಯನ್ನು ಕೊಹ್ಲಿ ಪ್ರೊಮೋಟ್ ಮಾಡಲಿದ್ದಾರೆ. ಪಾಲುದಾರಿಕೆ ಬ್ರಾಂಡ್ ನ ಟಿವಿ ಮತ್ತು ಮುದ್ರಣ ಅಭಿಯಾನಗಳು ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ಅಬೊವ್ ದಿ ಲೈನ್ (ಎಟಿಎಲ್) ಮತ್ತು ಬಿಲೋನ್ ದಿ ಲೈನ್ (ಬಿಟಿಎಲ್) ಇರಲಿದೆ.
ವಿವೋ ಇಂಡಿಯಾ ಬ್ರಾಂಡ್ ಸ್ಟ್ರಾಟಜಿ ನಿರ್ದೇಶಕ ನಿಪುನ್ ಮರಿಯಾ ಹೇಳಿಕೆ ನೀಡಿ, “ನಾವು ಕೊಹ್ಲಿಯೊಂದಿಗೆ ಸಂಬಂಧ ಹೊಂದಿದ್ದಕ್ಕೆ ನಾವು ರೋಮಾಂಚನಗೊಂಡಿದ್ದೇವೆ. ನಮ್ಮ ಗಮನವು ಯಾವಾಗಲೂ ನಮ್ಮ ಗ್ರಾಹಕರ ಅಗತ್ಯತೆಗಳು ಮತ್ತು ಆದ್ಯತೆಗಳ ಮೇಲೆ ಇರುತ್ತದೆ. ನಮ್ಮ ಗ್ರಾಹಕರ ಜೀವನದಲ್ಲಿ ಸಂತೋಷವನ್ನು ತರಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.
ಕೊಹ್ಲಿಯಂತಹ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ, ನಾವು ಕಿರಿಯ ಗ್ರಾಹಕರೊಂದಿಗೆ ಉತ್ತಮವಾಗಿ ಸಂಪರ್ಕ ಸಾಧಿಸಬಹುದು ಎಂಬುದನ್ನು ನಾವು ನಂಬುತ್ತೇವೆ. ಅಮೀರ್ ಖಾನ್ ಮತ್ತು ಸಾರಾ ಅಲಿ ಖಾನ್ ಅವರಲ್ಲದೆ, ಕ್ರೀಡಾಪಟುವೊಂದಿಗೆ ಸಂಪರ್ಕ ಸಾಧಿಸುವ ಮೂಲಕ, ನಾವು ಹೆಚ್ಚು ಹೆಚ್ಚು ಜನರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)