
ಕರ್ನಾಟಕಪ್ರಮುಖ ಸುದ್ದಿ
ಖಾಸಗಿ ಬಸ್ – ಜೀಪು ನಡುವೆ ಅಪಘಾತ : ವೃದ್ಧೆ ಸಾವು
ರಾಜ್ಯ( ಮಡಿಕೇರಿ)ಏ.8:- ಮಡಿಕೇರಿ- ವಿರಾಜಪೇಟೆ ರಸ್ತೆಯ ಬೇತ್ರಿ ಬಳಿ ಖಾಸಗಿ ಬಸ್ ಹಾಗೂ ಜೀಪು ನಡುವೆ ಅಪಘಾತ ಸಂಭವಿಸಿದ್ದು, ವೃದ್ಧೆಯೊಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿದ್ದಾರೆ.
ಮೃತರನ್ನು ದಿವಂಗತ ಮುಕ್ಕಾಟಿ ಪೂವಯ್ಯ ಅವರ ಪತ್ನಿ ಲಕ್ಷ್ಮಿ (70)ಎಂದು ಹೇಳಲಾಗಿದೆ. ಅವರ ಪುತ್ರ, ನಿವೃತ್ತ ಯೋಧ ಮೋಹನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿರಾಜಪೇಟೆ ಕಡೆಯಿಂದ ಖಾಸಗಿ ಬಸ್ ಮಡಿಕೇರಿಯತ್ತ ಬರುತ್ತಿತ್ತು. ಮಡಿಕೇರಿ ಕಡೆಯಿಂದ, ಜೀಪು ವಿರಾಜಪೇಟೆ ಕಡೆ ತೆರಳುತ್ತಿತ್ತು. ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ರಸ್ತೆ ಬದಿಯ ವಿದ್ಯುತ್ ಕಂಬವೂ ಮುರಿದು ಬಿದ್ದಿದೆ.