ದೇಶಪ್ರಮುಖ ಸುದ್ದಿ

ಒತ್ತಡ ಮುಕ್ತ ಪರೀಕ್ಷೆಗಳಿಗೆ ಆದ್ಯತೆ ನೀಡಬೇಕು : ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಸಲಹೆ

ದೇಶ( ನವದೆಹಲಿ)ಏ.8:- ಒತ್ತಡ ಮುಕ್ತ ಪರೀಕ್ಷೆಗಳಿಗೆ ಆದ್ಯತೆ ನೀಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರೊಂದಿಗೆ ನಡೆಸಿದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪರೀಕ್ಷೆ ಬಗ್ಗೆ ನಾವು ಹೆಚ್ಚಾಗಿ ಆಲೋಚಿಸುತ್ತೇವೆ ಆದರೆ ಜೀವನದಲ್ಲಿ ಪರೀಕ್ಷೆಯೇ ಕೊನೆಯಲ್ಲ, ಪರೀಕ್ಷೆಯನ್ನೇ ಜೀವನದ ಕನಸುಗಳ ಅಂತ್ಯ ಎಂದು ಭಾವಿಸಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು ಪರೀಕ್ಷೆಗಳು ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಇರುವ ಅವಕಾಶ ಎಂದು ಬಣ್ಣಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿದರು. ನಾವು ಒಂದು ವರ್ಷದಿಂದ ಕೊರೋನಾವೈರಸ್ ನಡುವೆ ವಾಸಿಸುತ್ತಿದ್ದೇವೆ. ನಿಮ್ಮೆಲ್ಲರನ್ನೂ ಭೇಟಿಯಾಗಬೇಕೆಂಬ ಬಯಕೆಯನ್ನು ಬಿಟ್ಟುಕೊಟ್ಟು ಹೊಸ ಸ್ವರೂಪದೊಂದಿಗೆ ವಿಡಿಯೋ ಮೂಲಕ ನಾನು ನಿಮ್ಮ ಬಳಿ ಬರಬೇಕಾಯಿತು. ನಿಮ್ಮನ್ನು ಭೇಟಿಯಾಗದಿರುವುದು, ನಿಮ್ಮ ಉತ್ಸಾಹವನ್ನು ಅನುಭವಿಸದಿರುವುದು ನನಗೆ ಅಪಾರ ದುಃಖದ ಸಂಗತಿ ಎಂದಿದ್ದಾರೆ.

ನಿಮಗೆ ಅಧ್ಯಯನ ಮಾಡಲು ಎರಡು ಗಂಟೆ ಇದ್ದರೆ ಪ್ರತಿಯೊಂದು ವಿಷಯವನ್ನು ಓದಿ, ಮೊದಲು ಕಷ್ಟಕರವಾದ ವಿಷಯವನ್ನು ತೆಗೆದುಕೊಳ್ಳಿ, ನಿಮ್ಮ ಮನಸ್ಸು ತಾಜಾವಾಗಿದ್ದರೆ, ಮೊದಲು ಕಷ್ಟಕರವಾದ ವಿಷಯವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ನೀವು ಕಠಿಣ ಸಮಸ್ಯೆಯನ್ನು ಪರಿಹರಿಸಿದರೆ, ಅದು ಸರಳ ಮತ್ತು ಸುಲಭವಾಗುತ್ತದೆ ‘ ಕಷ್ಟಕರ ವಿಷಯಗಳನ್ನು ಹೇಗೆ ಕಲಿಯುವುದು ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸುವಾಗ ಪ್ರಧಾನಿ ಹೇಳಿದ್ದಾರೆ.

ಈ ಬಾರಿ ಕರ್ನಾಟಕದಿಂದ ಇಬ್ಬರು ವಿದ್ಯಾರ್ಥಿಗಳು ಪ್ರಧಾನಿಗಳ ಜತೆ ನೇರ ಸಂವಾದದಲ್ಲಿ ಭಾಗವಹಿಸಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: