
ಕ್ರೀಡೆಪ್ರಮುಖ ಸುದ್ದಿ
ಅರ್ಜೆಂಟೀನಾ ಮಣಿಸಿದ ಭಾರತದ ಹಾಕಿ ತಂಡ
ದೇಶ( ನವದೆಹಲಿ)ಏ.8:- ಪ್ರವಾಸದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡ, ಒಲಿಂಪಿಕ್ ಚಾಂಪಿಯನ್ ಆತಿಥೇಯ ಅರ್ಜೆಂಟೀನಾವನ್ನು 4-3ರಿಂದ ಸೋಲಿಸಿತು.
ನೀಲಕಂಠ್ ಶರ್ಮಾ (16ನೇ ನಿಮಿಷ), ಹರ್ಮನ್ಪ್ರೀತ್ ಸಿಂಗ್ (28ನೇ ನಿಮಿಷ), ರೂಪಿಂದರ್ ಪಾಲ್ ಸಿಂಗ್ (33ನೇ ನಿಮಿಷ) ಮತ್ತು ವರುಣ್ ಕುಮಾರ್ (47ನೇ ನಿಮಿಷ) ಭಾರತ ಪರ ಗೋಲು ಗಳಿಸಿದರು. ಒಲಿಂಪಿಕ್ ಚಾಂಪಿಯನ್ ತಂಡದ ಪರ ಡ್ರ್ಯಾಗ್ಫ್ಲಿಕರ್ ಲಿಯಾಂಡ್ರೊ ಟೋಲಿನಿ (35 ಮತ್ತು 53ನೇ ನಿಮಿಷ) ಮತ್ತು ಮಾಸೊ ಕಸೆಲಾ (41ನೇ ನಿಮಿಷ) ಗೋಲು ಗಳಿಸಿದರು.
ನಾಯಕ ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ತಂಡವು ತನ್ನ 16 ದಿನಗಳ ಪ್ರವಾಸದಲ್ಲಿ ಅರ್ಜೆಂಟೀನಾ ವಿರುದ್ಧ ಆರು ಪಂದ್ಯಗಳನ್ನು ಆಡಲು ನಿರ್ಧರಿಸಿದೆ. ಇದರಲ್ಲಿ ಡಬಲ್ ಹೆಡರ್ ಎಫ್ಐಹೆಚ್ ಹಾಕಿ ಪ್ರೊ ಲೀಗ್ ಪಂದ್ಯಗಳು ಏಪ್ರಿಲ್ 11 ಮತ್ತು 12 ರಂದು ನಡೆಯಲಿವೆ. (ಏಜೆನ್ಸಿಸ್,ಎಸ್.ಎಚ್)