
ಮೈಸೂರು
ಕೊರೊನಾ ಯೋಧರಿಗೆ ಧನ್ಯವಾದ ತಿಳಿಸಲು ಸಾವಿರ ಕಿ.ಮಿ.ನಡೆದು ಮರಳಿದ ಭರತ್!
ಮೈಸೂರು, ಏ.8:- ಕೊರೊನಾ ಯೋಧರಿಗೆ ಧನ್ಯವಾದ ತಿಳಿಸಲು, ಜನರಿಗೆ ವಿವಿಧ ಸಂಗತಿಗಳ ಬಗ್ಗೆ ಅರಿವು ಮೂಡಿಸಲು ಮೈಸೂರಿನ ಭರತ್ ಎಂಬಾತ ಬರೋಬ್ಬರಿ 4 ಸಾವಿರ ಕಿ.ಮೀ. ನಡೆದು ಈಗ ಮೈಸೂರಿಗೆ ಮರಳಿದ್ದಾರೆ.
ಮೈಸೂರಿನವರೇ ಆದ ಭರತ್ ಕೊರೊನಾ ಯೋಧರಿಗೆ ವಿಶಿಷ್ಟವಾಗಿ ಧನ್ಯವಾದ ತಿಳಿಸುವ ನಿಟ್ಟಿನಲ್ಲಿ ಡಿಸೆಂಬರ್ 11ರಂದು ಮೈಸೂರಿನಿಂದ ತಮ್ಮ ಪಯಣ ಆರಂಭಿಸಿದರು. ರಾಷ್ಟ್ರೀಯ ಹೆದ್ದಾರಿಯ ಮೂಲಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಕಾಲ್ನಡಿಗೆಯಲ್ಲಿ ಸಂಚರಿಸಿದರು. ಇದೇ ವೇಳೆ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ, ಚಂಡೀಗಢ, ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.
ಇಷ್ಟು ಮಾತ್ರವಲ್ಲದೆ ದಾರಿಯುದ್ದಕ್ಕೂ 140ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಶಾಲೆ, ಕಾಲೇಜುಗಳಿಗೆ ತೆರಳಿ ಮಕ್ಕಳೊಂದಿಗೆ ಮಾತನಾಡಿದ್ದಾರೆ. ಆಯಾ ಸ್ಥಳಗಳಲ್ಲಿ ಸಿಗುವ ಆಹಾರ ಸೇವಿಸಿ ದೇವಸ್ಥಾನ, ಗುರುದ್ವಾರ, ಫುಟ್ಪಾತ್ಗಳಲ್ಲಿ ಮಲಗಿದ್ದಾರೆ. ನಂತರ ಮಾ. 18ರಂದು 99 ಕಿ.ಮೀ. ಪಯಣ ಮುಗಿಸಿದ್ದಾರೆ.
ನಂತರ 3 ದಿನಗಳ ಕಾಲ ದೆಹಲಿಯದ್ದ ಭರತ್ ತವರಿಗೆ ಮರಳಿದ್ದಾರೆ. 3 ತಿಂಗಳು, 9 ದಿನಗಳಲ್ಲಿ 4 ಸಾವಿರ ಕಿ.ಮೀ. ಸಂಚರಸಿರುವ ಭರತ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿದೆ. (ಕೆ.ಎಸ್,ಎಸ್.ಎಚ್)