ದೇಶಪ್ರಮುಖ ಸುದ್ದಿ

ಚೆಕ್ ಬೌನ್ಸ್ ಪ್ರಕರಣ: ನಟ ಶರತ್ ಕುಮಾರ್, ಪತ್ನಿ ರಾಧಿಕಾ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ

ಚೆನ್ನೈ,ಏ.8-ಚೆಕ್​ ಬೌನ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳಿನ ಖ್ಯಾತ ನಟ ಶರತ್‌ಕುಮಾರ್ ಹಾಗೂ ಅವರ ಪತ್ನಿ ರಾಧಿಕಾ ಶರತ್ ಕುಮಾರ್ ಅವರಿಗೆ ಇಲ್ಲಿಯ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಇವರ ಜತೆ ಮಲಯಾಳಂನ ಚಿತ್ರ ನಿರ್ಮಾಪಕ ಲಿಸ್ಟನ್​ ಸ್ಟೆಫನ್​ ಅವರಿಗೂ ಶಿಕ್ಷೆ ವಿಧಿಸಲಾಗಿದೆ. 2014ರಲ್ಲಿ ಇವರೆಲ್ಲರೂ ಸೇರಿ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಣಕಾಸು ಕಂಪೆನಿಯೊಂದರಿಂದ ಎರಡು ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಈ ಸಾಲದಲ್ಲಿ ಎರಡು ಚಲನಚಿತ್ರಗಳನ್ನು ನಿರ್ಮಿಸುವುದಾಗಿ ಹೇಳಿದ್ದರು.

ಸಹ ನಟನಾಗಿರುವ ಮ್ಯಾಜಿಕ್ ಫ್ರೇಮ್ಸ್, ವಿಕ್ರಮ್ ಪ್ರಭು ಮತ್ತು ಕೀರ್ತಿ ಸುರೇಶ್ ಅವರೊಂದಿಗೆ 2014 ರಲ್ಲಿ ಚಿತ್ರ ಮಾಡಲು ಯೋಜಿಸಿದ್ದು,  ಅವರು ರೇಡಿಯನ್ಸ್‌ನಿಂದ 1.5 ಕೋಟಿ ರೂ. ಹಣ ಪಡೆದುಕೊಂಡಿದ್ದರು, ಮಾರ್ಚ್ 2015 ರೊಳಗೆ ಹಣವನ್ನು ಹಿಂದಿರುಗಿಸುವುದಾಗಿ ಅವರು ಹೇಳಿದರು. ಆದರೆ ಹಣವನ್ನು ಹಿಂದಿರುಗಿಸಲಿಲ್ಲ. ಅವರು ಕೊಟ್ಟಿದ್ದ ಚೆಕ್​ ಬೌನ್ಸ್​ ಆಗಿತ್ತು.

ಈ ಹಿನ್ನೆಲೆಯಲ್ಲಿ ನಟ ದಂಪತಿ ಹಾಗೂ ನಿರ್ಮಾಪಕನ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಾಗಿತ್ತು. ಮದ್ರಾಸ್ ಹೈಕೋರ್ಟ್​ ಇವರ ವಿರುದ್ಧ ಇದ್ದ ಕ್ರಿಮಿನಲ್​ ಕೇಸ್​ ಅನ್ನು ರದ್ದು ಮಾಡಿತ್ತು. ಆದರೆ ಈ ಪ್ರಕರಣದ ವಿಚಾರಣೆಯನ್ನು ನಡೆಸುವಂತೆ ವಿಶೇಷ ಕೋರ್ಟ್​ಗೆ ಆದೇಶಿಸಿತ್ತು. ಇದೀಗ ವಿಚಾರಣೆ ಸಂಪೂರ್ಣಗೊಂಡಿದ್ದು, ಒಂದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: