ದೇಶಪ್ರಮುಖ ಸುದ್ದಿ

ಕೋವಿಡ್ ಲಸಿಕೆಯ 2ನೇ ಡೋಸ್ ಪಡೆದ ಪ್ರಧಾನಿ ಮೋದಿ

ನವದೆಹಲಿ,ಏ.8-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಕೋವಿಡ್ ಲಸಿಕೆಯ ಎರಡನೇ ಡೋಸ್‌ ಅನ್ನು ಪಡೆದುಕೊಂಡರು.

ಪ್ರಧಾನಿ ಮೋದಿ ಅವರು, ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಲಸಿಕೆಯ ಎರಡನೇ ಡೋಸ್ ಅನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದಾರೆ.

‘ನಾನು ಇಂದು ಏಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಪಡೆದೆ. ಕೊರೊನಾ ವೈರಸ್‌ ಅನ್ನು ಮಣಿಸಲು ನಮ್ಮ ಮುಂದಿರುವ ಕೆಲವೇ ಆಯ್ಕೆಗಳಲ್ಲಿ ಲಸಿಕೆಯೂ ಒಂದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಒಂದು ವೇಳೆ ಲಸಿಕೆ ಪಡೆಯಲು ನೀವು ಅರ್ಹರಾಗಿದ್ದರೆ, ಕೂಡಲೇ ಲಸಿಕೆ ಪಡೆಯಿರಿ. ಅದಕ್ಕಾಗಿ ನೋಂದಣಿ ಮಾಡಿಕೊಳ್ಳಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ಏಮ್ಸ್‌ನಲ್ಲಿ ನರ್ಸ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪುದುಚೇರಿಯ ಪಿ. ನಿವೇದಾ ಮತ್ತು ಪಂಜಾಬ್‌ನ ನಿಶಾ ಶರ್ಮಾ ಎಂಬುವರು ಪ್ರಧಾನಿಗೆ ಲಸಿಕೆ ನೀಡಿದರು.

ಮಾರ್ಚ್‌ 1ರಂದು ಮೋದಿ ಅವರು ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಹಾಕಿಸಿಕೊಂಡಿದ್ದರು. ಪುದುಚೇರಿಯ ಪಿ.ನಿವೇದಾ ಪ್ರಧಾನಿಗೆ ಭಾರತ್‌ ಬಯೋಟೆಕ್‌ನ ‘ಕೊವ್ಯಾಕ್ಸಿನ್‌’ ಲಸಿಕೆ ನೀಡಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: