ಮೈಸೂರು

ಮೈಸೂರು ವಿವಿಯಲ್ಲಿ ಶೈಕ್ಷಣಿಕ ಸಾಲಿನಿಂದ ಎಂ.ಫಿಲ್ ಕೋರ್ಸ್ ಸ್ಥಗಿತ

ಮೈಸೂರು,ಏ.8-ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020-21ನೇ ಶೈಕ್ಷಣಿಕ ಸಾಲಿನಿಂದ ಎಂ.ಫಿಲ್ ಕೋರ್ಸ್ ಅನ್ನು ಸ್ಥಗಿತಗೊಳಿಸಲಾಗಿದೆ.

ಮಾನಸಗಂಗೋತ್ರಿ ವಿಜ್ಞಾನ ಭವನದ ಸಭಾಂಗಣದಲ್ಲಿ ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಮೈಸೂರು ವಿವಿ ಶಿಕ್ಷಣ ಮಂಡಳಿಯ 3ನೇ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ತಿಳಿಸಲಾಯಿತು.

ಅಧಿಕೃತ ಅಧಿಸೂಚನೆಯನ್ವಯ ಅನುಷ್ಠಾನಗೊಳಿಸಿ, ನಡೆಸಲಾಗುತ್ತಿದ್ದ ಎಂ.ಫಿಲ್ ಕೋರ್ಸ್ ಗಳ ನಿಯಮಾವಳಿಗೆ ಮಾರ್ಪಾಡು ಮಾಡಿ, 2020ರಲ್ಲಿ ಕಳುಹಿಸಲಾಗಿತ್ತು. ಈ ಸಂಬಂಧ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ)ಯು 25-11-2020 ಮತ್ತು 19-01-2021ರ ಪತ್ರದಲ್ಲಿ ಎಂ.ಫಿಲ್ ನಿಯಮಾವಳಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟತೆಯನ್ನು ಕೋರಿತ್ತು.

ಈ ವಿಷಯದ ಸಂಬಂಧ ಸಾಧಕ ಬಾಧಕಗಳನ್ನು ಚರ್ಚಿಸಲು 3-2-2021ರಂದು ನಡೆದ ಎಂ.ಫಿಲ್ ಸಮಿತಿ ಸಭೆಯ ತೀರ್ಮಾನದಂತೆ ಹಾಗೂ ಕುಲಪತಿಗಳ ಒಪ್ಪಿಗೆ ಮೇರೆಗೆ ವಿವಿಯಲ್ಲಿ 2020-21ನೇ ಶೈಕ್ಷಣಿಕ ಸಾಲಿನಿಂದ ಎಂ.ಫಿಲ್ ಕೋರ್ಸ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂಬ ಅಂಶವನ್ನು ತಿಳಿಸಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆಗೆ 16-2-2021 ರಂದು ಪತ್ರ ಬರೆಯಲಾಗಿದ್ದು, 25-09-2020 ರಲ್ಲಿ ಎಂ.ಫಿಲ್ ನಿಯಮಕ್ಕೆ ಮಾರ್ಪಾಡು ಮಾಡಿ ಕಳುಹಿಸಲಾಗಿದ್ದ ಪ್ರಸ್ತಾವನೆಯನ್ನು ಹಿಂದಿರುಗಿಸುಂತೆ ಕೋರಲಾಗಿದೆ ಎಂದು ಕುಲಪತಿ ತಿಳಿಸಿದರು. (ಎಂ.ಎನ್)

 

 

Leave a Reply

comments

Related Articles

error: