ಕರ್ನಾಟಕಪ್ರಮುಖ ಸುದ್ದಿ

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಅವರಿಂದ ಆತ್ಮಹತ್ಯೆಗೆ ಯತ್ನ

ಕೋಲಾರ,ಏ.8- ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಿಗ್​ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಇಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮದುವೆ ವಿವಾದದ ಹಿನ್ನೆಲೆ ‌ಮನನೊಂದ ಚೈತ್ರಾ ಕೋಲಾರದ ಕುರುಬರಪೇಟೆ ಮನೆಯಲ್ಲಿ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಚೈತ್ರಾ ಕೊಟ್ಟೂರು ಅವರು ಮಾ.27ರಂದು ಪ್ರಿಯಕರ ನಾಗಾರ್ಜುನ್ ಜತೆ ಬೆಂಗಳೂರಿನ ಬ್ಯಾಡರಾಯನಪುರದ ಗಣಪತಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು.

ಬಿಗ್​ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಇಂದು ಬೆಳಗಿನ ಜಾವ ವಿಷಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂದು ಸಂಜೆಯೇ ಪತ್ನಿ ವಿರುದ್ಧ ಪತಿ ಪೊಲೀಸ್​ ಠಾಣೆ ಮೆಟ್ಟಿಲೇರುವ ಮೂಲಕ ನವಜೋಡಿ ಮದುವೆ ವಿವಾದ ಸ್ಫೋಟಗೊಂಡಿತ್ತು. ಕೆಲವು ಕನ್ನಡಪರ ಸಂಘಟನೆಗಳು ಬೆದರಿಸಿ ನನ್ನನ್ನು ಬಲವಂತವಾಗಿ ಮದುವೆ ಮಾಡಿದ್ದಾರೆ ಆರೋಪಿಸಿದ್ದರು.

ಮದುವೆ ಬಗ್ಗೆ ತಗಾದೆ ತೆಗೆದ ನಾಗಾರ್ಜುನ್ ಪೋಷಕರು ಮತ್ತು ಚೈತ್ರಾ ಕೊಟ್ಟೂರು ಪೋಷಕರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಾಗಾರ್ಜುನ್ ತನ್ನ ಪೋಷಕರೊಂದಿಗೆ ವಾಪಸ್​ ಆಗಿದ್ದರು. ಚೈತ್ರಾ ತನ್ನ ಪೋಷಕರೊಂದಿಗೆ ಕೋಲಾರದ ಮನೆಯಲ್ಲಿದ್ದರು. ಈ ಮಧ್ಯೆ ನಾಗಾರ್ಜುನ್​ ಮತ್ತು ತಮ್ಮ ನಡುವಿನ ಪ್ರೀತಿ ಸಂಕೇತದ ಹಲವು‌ ವಿಡಿಯೋ ಮತ್ತು ಪೋಟೋಗಳನ್ನು ಚೈತ್ರಾ ಹಂಚಿಕೊಂಡಿದ್ದರು. ಇದೀಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: