ಮೈಸೂರು
ಭಾಗಮಂಡಲ ಮೇಲ್ಸೇತುವೆ ನಿರ್ಮಾಣ; ದಾಖಲೆ ಸಲ್ಲಿಸಿ, ಪರಿಹಾರ ಸ್ವೀಕರಿಸಿ
ಮೈಸೂರು,ಏ . 8:- ಮಡಿಕೇರಿ ತಾಲ್ಲೂಕು ಭಾಗಮಂಡಲ ಮೇಲ್ಸೇತುವೆ ನಿರ್ಮಾಣ ಯೋಜನೆಗೆ ಜಮೀನು ಕಟ್ಟಡಗಳ ಸ್ವಾಧೀನಕ್ಕೆ ಕಾವೇರಿ ನಿಗಮದಿಂದ ಈಗಾಗಲೇ ಕ್ರಮವಹಿಸಿದ್ದು, ಮೇಲ್ಸೇತುವೆ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಕೆಲವು ಕಟ್ಟಡ ಹಾಗೂ ಜಮೀನು ಮಾಲೀಕರು ಇನ್ನೂ ಯಾವುದೇ ಸೂಕ್ತ ದಾಖಲೆಗಳನ್ನು ನೀಡದೆ ಪರಿಹಾರ ಪಡೆಯದಿರುವುದು ಕಂಡು ಬಂದಿದೆ ಎಂದು ಕಬಿನಿ ಜಲಾಶಯ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆ ಕೂಡಲೇ ಕಬಿನಿ ಜಲಾಶಯ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ, ಮೈಸೂರು ಕಛೇರಿ ಅಥವಾ ಕಾರ್ಯಪಾಲಕ ಇಂಜಿನಿಯರ್, ಕುಶಾಲ ನಗರದ ಕಾವೇರಿ ನಿರಾವರಿ ನಿಗಮ ನಿಯಮಿತ, ಹಾರಂಗಿ ಪುನರ್ವಸತಿ ವಿಭಾಗಕ್ಕೆ ದಾಖಲೆಗಳನ್ನು ಸಲ್ಲಿಸಿ ಪರಿಹಾರ ಪಡೆಯಬಹುದು. ಇಲ್ಲವಾದಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಕಬಿನಿ ಜಲಾಶಯ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.