
ಮೈಸೂರು
ಅಪರಿಚಿತ ವ್ಯಕ್ತಿಯ ಶವ ಪತ್ತೆ
ಮೈಸೂರು,ಏ . 8 :- ಮೈಸೂರಿನ ಮಹಾದೇವಪುರ ರಸ್ತೆಯಲ್ಲಿ ರಮ್ಮನಹಳ್ಳಿ ಕಡೆ ಸಾತಗಳ್ಳಿ `ಎ’ ಬಡಾವಣೆಯ ಬಳಿ ಇರುವ ಸೈಯದ್ ನೌಷದ್ ಎಂಬವರ ಉಯ್ಯಾಲೆಯ ಅಂಗಡಿಯ ಮುಂಭಾಗದ ಲೇಔಟ್ನ ರಸ್ತೆಯ ಫುಟ್ ಪಾತ್ನಲ್ಲಿ ಸುಮಾರು 50-55 ವರ್ಷದ ವಯಸ್ಸಿನ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು, ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕಲಂ-174ರ ಅನ್ವಯ ಪ್ರಕರಣ ದಾಖಲಾಗಿದೆ.
ಮೃತರ ಚಹರೆ ಇಂತಿದೆ
ಮೃತ ವ್ಯಕ್ತಿಯು 5.3 ಅಡಿ ಎತ್ತರವಿದ್ದು, ಕಪ್ಪು ಮೈಬಣ್ಣ, ದೃಡಕಾಯ ಶರೀರ, ತಲೆಯಲ್ಲಿ ಸುಮಾರು 1 ಇಂಚು ಕಪ್ಪು ತಲೆಗೂದಲು, ಬಿಳಿ ಮಿಶ್ರಿತ ಕಪ್ಪುಗಡ್ಡ ಮತ್ತು ಮೀಸೆಯನ್ನು ಹೊಂದಿದ್ದು, ಮೃತ ದೇಹದ ಮೇಲೆ ಒಂಧು ಬಿಳಿ ಬಣ್ಣದ ನಡುವೆ ಕಪ್ಪು ಚುಕ್ಕೆ ಡಿಸೈನ್ ಇರುವ ಅರ್ಧ ತೋಳಿನ ಶರ್ಟ್, ಒಂದು ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ಜಿಲ್ಲಾ ಕಂಟ್ರೋಲ್ ರೂಂ ದೂ.ಸಂ: 0821-2444800 ಅಥವಾ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ದೂ.ಸಂ: 08221-244955ಅನ್ನು ಸಂಪಕಿಸಬಹುದು ಎಂದು ಮೈಸೂರು ದಕ್ಷಿಣ ಪೆÇಲೀಸ್ ಠಾಣೆಯ ಉಪನೀರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.