ಮೈಸೂರು

ಕೋವಿಡ್ -19 ನಿಯಂತ್ರಣದ ಸಂಬಂಧ ಸರ್ಕಾರವು ಹೊರಡಿಸಿರುವ ನಿಯಮಗಳ ಉಲ್ಲಂಘನೆ ಮಾಡಿರುವವರ ವಿರುದ್ದ ನಗರ ಪೊಲೀಸರಿಂದ ಕಾನೂನು ಕ್ರಮ

ಮೈಸೂರು,ಏ.8:- ಕೋವಿಡ್ -19 ಹರಡುವಿಕೆಯ 2ನೇ ಅಲೆಯ ಹಿನ್ನಲೆಯಲ್ಲಿ ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಹೊರಡಿಸಿದ್ದು, ಇವುಗಳ ಜಾರಿ ಸಂಬಂಧ ಮೈಸೂರು ನಗರ ಪೊಲೀಸರು ಎಲ್ಲಾ ರೀತಿಯ ಅಗತ್ಯಕ್ರಮಗಳನ್ನು ಕೈಗೊಂಡಿದ್ದು, ಜಾಗೃತಿ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ. ಕೋವಿಡ್-19 ನಿಯಮಗಳ ಜಾರಿಗಾಗಿ ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳನ್ನು ವಿಶೇಷವಾಗಿ ಪರಿಶೀಲನೆ ಮಾಡುತ್ತಿದ್ದು, ಈ ಸ್ಥಳಗಳಲ್ಲಿ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.
ಮೈಸೂರು ನಗರದ ಪೊಲೀಸರು ನಗರದ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ಕೈಗೊಂಡಿದ್ದು, ಉಲ್ಲಂಘನೆಗಳ ವಿರುದ್ದ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ) ಹಾಗೂ The Disaster management act 2005 ರ ಅಡಿಯಲ್ಲಿ ಈ ಕೆಳಕಂಡಂತೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗಿದೆ.
ಉದಯಗಿರಿ ಠಾಣಾ ವ್ಯಾಪ್ತಿಯ ಶಾಂತಿನಗರ ಮಹದೇವಪುರ ಮುಖ್ಯರಸ್ತೆ, ಹುಲಿಯಮ್ಮ ತೋಟದ ಪಕ್ಕದಲ್ಲಿರುವ ನ್ಯೂ ಸ್ಟಾರ್ ಟೀ ಕಾರ್ನರ್ ಅಂಗಡಿಯ ಮಾಲೀಕ ಮನ್ಸೂರ್ ಅಹಮ್ಮದ್ ರವರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ ಧರಿಸದ ಗ್ರಾಹಕರುಗಳಿಗೆ ಟೀ ವ್ಯಾಪಾರ ಮಾಡುತ್ತಿದ್ದ ಹಿನ್ನಲೆಯಲ್ಲಿ ಮನ್ಸೂರ್ ಅಹಮ್ಮದ್ ರವರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.
ಉದಯಗಿರಿ ಠಾಣಾ ವ್ಯಾಪ್ತಿಯ ಎಂ.ಜಿ ರಸ್ತೆಯ ಬಸಪ್ಪಾಜಿ ವೃತ್ತದ ಬಳಿ ಟೀ ಅಂಗಡಿಯ ಮಾಲೀಕ ರಂಗಸ್ವಾಮಿ ರವರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ ಧರಿಸದ ಗ್ರಾಹಕರುಗಳಿಗೆ ಟೀ ವ್ಯಾಪಾರ ಮಾಡುತ್ತಿದ್ದ ಹಿನ್ನಲೆಯಲ್ಲಿ ರಂಗಸ್ವಾಮಿ ರವರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.
ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಶಿವರಾಂಪೇಟೆ ರಸ್ತೆಯಲ್ಲಿರುವ ಮಧುಷಾಹಿ ಸಮೋಸ ಮಾಲೀಕ ಸೂರಜ್ ಕುಮಾರ್ ರವರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ ಧರಿಸದ ಗ್ರಾಹಕರುಗಳಿಗೆ ಸಮೋಸ ವ್ಯಾಪಾರ ಮಾಡುತ್ತಿದ್ದ ಹಿನ್ನಲೆಯಲ್ಲಿ ಸೂರಜ್ ಕುಮಾರ್ ರವರ ವಿರುದ್ದ ಪ್ರಕರಣ ದಾಖಲಿಸಲು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿಕೊಳ್ಳಲಾಗಿದೆ.
ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಶಿವರಾಂಪೇಟೆಯ ವಿನೋಭರಸ್ತೆಯಲ್ಲಿರುವ ವಾಸವಾಂಭ ಸ್ಟೋರ್ಸ್‍ನ ಮಾಲೀಕ ಮಂಜುನಾಥ್ ವಿ.ಎ ರವರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ ಧರಿಸದ ಗ್ರಾಹಕರುಗಳಿಗೆ ಪನ್ಸಾರಿ ವಸ್ತುಗಳನ್ನು ವ್ಯಾಪಾರ ಮಾಡುತ್ತಿದ್ದ ಹಿನ್ನಲೆಯಲ್ಲಿ ಮಂಜುನಾಥ್ ವಿ.ಎ ರವರ ವಿರುದ್ದ ಪ್ರಕರಣ ದಾಖಲಿಸಲು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿಕೊಳ್ಳಲಾಗಿದೆ.
ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕ ರಸ್ತೆಯಲ್ಲಿರುವ ಸಂತೋಷ್ ಜ್ಯೂಯಲರ್ಸ್‍ನ ಕೆಲಸಗಾರನಾದ ಗೋವಿಂದ, ಮತ್ತು ಮೂವರು ಗ್ರಾಹಕರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ ಧರಿಸದೆ ವ್ಯಾಪಾರ ಮಾಡುತ್ತಿದ್ದ ಹಿನ್ನಲೆಯಲ್ಲಿ ಸದರಿ ಕೆಲಸಗಾರ ಮತ್ತು 3 ಗ್ರಾಹಕರ ವಿರುದ್ದ ಪ್ರಕರಣ ದಾಖಲಿಸಲು
ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿಕೊಳ್ಳಲಾಗಿದೆ.

ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿ ಎನ್.ಎಸ್ ರಸ್ತೆಯಲ್ಲಿರುವ ಅಮೃತ್ ಮಿಲ್ಕ್ ಬಾರ್‍ನ ಮಾಲೀಕರಾದ ರಮೇಶ್ ರವರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ ಧರಿಸದ ಗ್ರಾಹಕರುಗಳಿಗೆ ಟೀ ವ್ಯಾಪಾರ ಮಾಡುತ್ತಿದ್ದ ಹಿನ್ನಲೆಯಲ್ಲಿ ರಮೇಶ್‍ ರವರ ವಿರುದ್ದ ಪ್ರಕರಣ ದಾಖಲಿಸಿರುತ್ತದೆ.
ಅಶೋಕಪುರಂ ಠಾಣೆ ವ್ಯಾಪ್ತಿಯ ಜಯನಗರದ ಮಂಜುನಾಥ್ ಬೇಕರಿಯ ಮಾಲೀಕರಾದ ಸತೀಶ್‍ರವರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ ಧರಿಸದ ಗ್ರಾಹಕರುಗಳಿಗೆ ಬೇಕರಿ ಪದಾರ್ಥಗಳನ್ನು ವ್ಯಾಪಾರ ಮಾಡುತ್ತಿದ್ದ ಹಿನ್ನಲೆಯಲ್ಲಿ ಸತೀಶ್ ರವರ ವಿರುದ್ದ ಪ್ರಕರಣ ದಾಖಲಿಸಲು ನ್ಯಾಯಾಲಯದಲ್ಲಿ ಮನವಿ
ಸಲ್ಲಿಸಿಕೊಳ್ಳಲಾಗಿದೆ.
ಕೋವಿಡ್ -19 ನಿಯಮಗಳ ಜಾರಿ ಸಂಬಂಧ, ನಗರ ಪೊಲೀಸರು ಇದೇ ರೀತಿ ಪ್ರತಿ ದಿನ ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳ ಕಡೆ ಭೇಟಿ ನೀಡಿ ಪರಿಶೀಲಿಸಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಪ್ರಕರಣಗಳನ್ನು ದಾಖಲಿಸಲಿದ್ದು,ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರಿಗೆ ಸ್ಥಳದಂಡವನ್ನು ವಿಧಿಸಲಾಗುವುದು ಎಂದು ನಗರದ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: