ಮೈಸೂರು

ರಕ್ತದಾನ ಮಾಡುವ ಮೂಲಕ ಚಿತ್ರನಟ ಅಲ್ಲುಅರ್ಜುನ್ ಹುಟ್ಟು ಹಬ್ಬ ಆಚರಿಸಿದ ಅಭಿಮಾನಿಗಳು

ಮೈಸೂರು,ಏ.8:-   ಭಾರತ ಚಿತ್ರರಂಗ ಕಂಡ ಜನಪ್ರಿಯ ಚಿತ್ರನಟ ಅಲ್ಲುಅರ್ಜುನ್ ಅವರ ಹುಟ್ಟುಹಬ್ಬದ ಅಂಗವಾಗಿ ಕರ್ನಾಟಕ ಅಲ್ಲುಅರ್ಜುನ್ ಫ್ಯಾನ್ಸ್ ವೇಲ್ ಫೇರ್ ಅಸೋಸಿಯೇಷನ್ ವತಿಯಿಂದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಶ್ರೇಷ್ಠದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

65ಮಂದಿ ಅಲ್ಲು ಅರ್ಜುನ್ ಅಭಿಮಾನಿಗಳು ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್
ಇತ್ತೀಚಿನ ದಿನಗಳಲ್ಲಿ ಯುವಕರು ಹುಟ್ಟುಹಬ್ಬ ಎಂದರೆ ಮೋಜು ಮಸ್ತಿ ದುಂದುವೆಚ್ಚ ಮಾಡುವ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅಭಿಮಾನಿ ಬಳಗದವರು ಫ್ಲೆಕ್ಸ್ ಹಾರ ತುರಾಯಿ ಪಠಾಕಿ ದುಂದುವೆಚ್ಚ ಮಾಡದೇ ಚಿತ್ರರಂಗದ ಅಂತರ ರಾಷ್ಟ್ರೀಯ ಸೆಲೆಬ್ರೇಟಿಯಾದ ಅಲ್ಲುಅರ್ಜುನ್ ರವರ ಹುಟ್ಟುಹಬ್ಬವನ್ನು ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ, ನಾವು ರಕ್ತದಾನ ಮಾಡಿದರೆ ದೇಹ ಆರೋಗ್ಯವಾಗಿರುತ್ತದೆ.  ಇನ್ನೊಬ್ಬರ ಜೀವವನ್ನು ಕಾಪಾಡಬಹುದು, ಯುವಪೀಳಿಗೆ ಹೆಚ್ಚಾಗಿ ರಕ್ತದಾನ ಮಾಡುವ ಕಡೆ ಮುಂದಾಗಬೇಕು ಎಂದರು.

ಜೀವಧಾರ ರಕ್ತನಿಧಿ ಕೇಂದ್ರ ನಿರ್ದೇಶಕರಾದ ಎಸ್.ಇ ಗಿರೀಶ್, ಮುತ್ತಣ್ಣ, ಕರ್ನಾಟಕ ಅಲ್ಲು ಅರ್ಜುನ್ ಫ್ಯಾನ್ಸ್ ವೇಲ್ ಫೇರ್ ಅಸೋಸಿಯೇಷನ್ ಸಂಚಾಲಕರಾದ ದಿಲೀಪ್ ಕುಮಾರ , ಚೇತನ್, ಆರ್ಯನಾಗ, ಶ್ರೀಧರ ಡಿ.ಎಲ್, ಪ್ರದೀಪ್, ಮುಂತಾದವರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: