ಮೈಸೂರು

ರಾಜಕೀಯ ಪಕ್ಷಗಳು ಕಾರ್ಯಕರ್ತರ ಸಂಕಷ್ಟ ನಿಧಿ ಸ್ಥಾಪಿಸಲಿ : ಡಾ.ಬಿಜೆ ವಿಜಯ್ ಕುಮಾರ್

ಮೈಸೂರು, ಏ.8:- ಮೈಸೂರು ಜಿಲ್ಲಾ ಹಾಗೂ ನಗರ ಕಾಂಗ್ರೆಸ್ ವತಿಯಿಂದ ಕೆಲವು ದಿನಗಳ ಹಿಂದೆಯಷ್ಟೇ ನಿಧನರಾದ ಹಿರಿಯ ಕಾಂಗ್ರೆಸಿಗರಾದರ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಸತ್ಯನಾರಾಯಣ , ಮೈಸೂರು ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಕೆ.ಸಿ. ಬಲರಾಮ್ ಹಾಗೂ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಮೈಸೂರು ಶಾಖಾ ಅಧ್ಯಕ್ಷರಾದ ಸಿದ್ದರಾಜು ರವರಿಗೆ ನಗರದ ಕಾಂಗ್ರೆಸ್ ಭವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ಈ ಸಂತಾಪ ಸಭೆಯಲ್ಲಿ ಕಾಂಗ್ರೆಸ್ ನ ಹಲವಾರು ಗಣ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿ ಅಗಲಿದ ಗಣ್ಯರಿಗೆ ಗೌರವ ನಮನ ಸಲ್ಲಿಸಿ ಕಾರ್ಯಕ್ರಮಕಕ್ಕೆ ಸಾಕ್ಷಿಯಾದರು .

ಇದೆ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಡಾ.ಬಿ.ಜೆ.ವಿಜಯ್ ಕುಮಾರ್ ದೇಶದ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಕೆಳಹಂತದ ಕಾರ್ಯಕರ್ತರು ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ನಿಷ್ಠಾವಂತ ಕಾರ್ಯಕರ್ತರು ಅನಾರೋಗ್ಯಕ್ಕೆ ತುತ್ತಾದಲ್ಲಿ ಅಥವಾ ಮರಣಹೊಂದಿದಲ್ಲಿ ಅವರಿಗೆ ಸಹಾಯವಾಗುವ ಅಥವಾ ಅವರ ಕುಟುಂಬಕ್ಕೆ ನೆರವಾಗುವ ರೀತಿಯಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಕಾರ್ಯಕರ್ತರ ಸಂಕಷ್ಟ ನಿಧಿಯನ್ನು ಸ್ಥಾಪಿಸಲು ಶ್ರದ್ಧಾಂಜಲಿ ಸಭೆಯಲ್ಲಿ ಒತ್ತಾಯಿಸಿದರು. ಚುನಾವಣೆಗಳಲ್ಲಿ ನೂರಾರು ಕೋಟಿ ಖರ್ಚು ಮಾಡುವ ರಾಜಕೀಯ ಪಕ್ಷಗಳು ಹಾಗೂ ಪಾರ್ಟಿ ಫಂಡ್ ಎಂದು ದೇಶದ ಶ್ರೀಮಂತ ವರ್ಗದಿಂದ ಹಾಗೂ ಕೈಗಾರಿಕೋದ್ಯಮಿ ಗಳಿಂದ ಸಂಗ್ರಹಿಸುವ ಸಾವಿರಾರು ಕೋಟಿ ಹಣ ಕೇವಲ ಚುನಾವಣೆಗಳಿಗೆ ಸೀಮಿತವಾಗುತ್ತದೆ. ಅಷ್ಟೇ ಅಲ್ಲದೆ ಇವತ್ತು ಬಹಳಷ್ಟು ರಾಜಕೀಯ ಪಕ್ಷಗಳ ಕಾರ್ಯಕರ್ತರು ಯಾವುದೇ ಅಧಿಕಾರ ಆರ್ಥಿಕ ಸಬಲತೇ ಇಲ್ಲದೆ, ಸುಮಾರು ನಲವತ್ತು ಐವತ್ತು ವರ್ಷಗಳ ಕಾಲ ಒಂದು ರಾಜಕೀಯ ಪಕ್ಷದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ವಯೋವೃದ್ಧ ಕಾಯಿಲೆಗಳಿಗೆ ತುತ್ತಾಗಿ ಯಾರು ದಿಕ್ಕಿಲ್ಲದೆ ಅನಾಥ ಜೀವನ ನಡೆಸಿ ಸಾವನ್ನಪ್ಪುತ್ತಿದ್ದಾರೆ. ಇದು ಕೇವಲ ರಾಜಕೀಯ ಪಕ್ಷಗಳಲ್ಲಿ ಮಾತ್ರ ಅಲ್ಲ, ಈ ವಿಚಾರದಲ್ಲಿ ರೈತ,ದಲಿತ, ಕನ್ನಡಪರ ಸಂಘಟನೆಯ ಹೋರಾಟಗಾರರು ಕೂಡ ಹೊರತಾಗಿಲ್ಲ.
ಆದ್ದರಿಂದ ರಾಜಕೀಯ ಪಕ್ಷಗಳ ಇಂತಹ ತುರ್ತು ನಿಧಿಯಿಂದ
ಪಕ್ಷ ಕಟ್ಟುವ ನಿಷ್ಠಾವಂತ ಕಾರ್ಯಕರ್ತರಿಗೆ ಅವರ ಕಷ್ಟದ ಸಮಯದಲ್ಲಿ ಗೌರವ ಸಲ್ಲಿಸಿದಂತಾಗುತ್ತದೆ. ಇದು ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಅಲ್ಲದೆ ದೇಶದಲ್ಲಿರುವ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಇಂತಹ ಸಂಕಷ್ಟ ನಿಧಿಯನ್ನು ಸ್ಥಾಪನೆ ಅತ್ಯಗತ್ಯ ಮತ್ತು ತುರ್ತು
ಎಂದು ಹೇಳಿದರು .ಇದರ ಜೊತೆಯಲ್ಲಿ ಪ್ರತಿಯೊಬ್ಬರು ಸಹ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಬಂದು ಅವರ ಕೊಡುಗೆಗಳನ್ನು ನೆನೆಯಬೇಕದದ್ದು ನಮ್ಮ ಕರ್ತವ್ಯ ಎಂದು ಹೇಳಿ ಅಗಲಿದ ನಾಯಕರ ಸಾಧನೆಗಳನ್ನು ಸ್ಮರಿಸಿದರು .

ಶ್ರದ್ಧಾಂಜಲಿ ಸಭೆಯಲ್ಲಿ ವಿಧಾನಪರಿಷತ್ತಿನ ಸದಸ್ಯರಾದ ಆರ್ ಧರ್ಮಸೇನ, ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್ ಮೂರ್ತಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ  ಪುಷ್ಪಲತಾ ಚಿಕ್ಕಣ್ಣ, ಮೈಸೂರು ಮಹಾನಗರ ಪಾಲಿಕೆಯ ಸದಸ್ಯರಾದ ಲೋಕೇಶ್ ಪಿಯಾ, ಶಿವಕುಮಾರ್, ಉಪ ಮಹಾಪೌರರು, ಕಾಂಗ್ರೆಸ್ ಪದಾಧಿಕಾರಿಗಳಾದ ಗುಡ್ಡಪ್ಪ ನ ಶಿವಣ್ಣ, ಹೆಡತಲೆ ಮಂಜುನಾಥ್, ಶಿವಪ್ರಸಾದ್, ಈಶ್ವರ್ ಚಕಡಿ, ಗಿರೀಶ್, ಎಂಕೆ ಅಶೋಕ್, ಪಿ ರಾಜು, ಮಂಜುನಾಥ ಪುರ ರಮೇಶ್, ಪ್ರಭಾಕರ್, ಓಂಕಾರ ಪ್ರಸಾದ್, ಹುಣಸೂರು ಬಸವಣ್, ಪುಟ್ಟಸ್ವಾಮಿ, ಸಿದ್ದರಾಜು, ಲಕ್ಷ್ಮಣ್, ನಾಗನಹಳ್ಳಿ ಉಮಾಶಂಕರ್, ಸೋಮಶೇಖರ್, ಟಿಬಿ ಚಿಕ್ಕಣ್ಣ, ಶಿವಮಲ್ಲು,ಉತ್ತನಹಳ್ಳಿ ಶಿವಣ್ಣ, ಬೆಳವಾಡಿ ಆರಿಫ್, ಸಕಳ್ಳಿ ಬಸವರಾಜ್, ಹೇಮಂತ್, ರಾಹುಲ್ ಕುಂಬ್ರಳ್ಳಿ, ಮನೋಜ್, ಮಹೇಶ್, ಇಂಕಲ್ ಪ್ರಕಾಶ್, ಅಗಲಿದ ಕುಟುಂಬವರ್ಗದವರಾದ ಪ್ರದೀಪ್ ಹಾಗೂ ಪ್ರಭಾಕರ್ ಬಲರಾಮ್ ಹಾಗೂ ಇತರೆ ಇತರೆ ಕಾಂಗ್ರೆಸ್ ಮುಖಂಡರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: