ಮೈಸೂರು

ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ಮಂಜೂರು

ಮೈಸೂರು, ಏಪ್ರಿಲ್.8:- ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ವಿಶೇಷ ಕಿರುಸಾಲ ಯೋಜನೆಯಡಿ 10,000 ರೂ. ಸಾಲ ಸೌಲಭ್ಯಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಿದ್ದ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಮಂಜೂರಾಗಿದ್ದು, ಫಲಾನುಭವಿಗಳು ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಈಗಾಗಲೇ ಸಾಲ ಮಂಜೂರಾತಿ ಬಗ್ಗೆ ದೂರವಾಣಿ ಅಥವಾ ಮೊಬೈಲ್ ಸಂದೇಶದ ಮೂಲಕ ಮಾಹಿತಿಯನ್ನು ಫಲಾನುಭವಿಗಳಿಗೆ ನೀಡಲಾಗಿದೆ.

ಫಲಾನುಭವಿಗಳು ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಂಬೂ ಬಜಾರ್ ರಸ್ತೆ ಇಲ್ಲಿಗೆ ಭೇಟಿ ನೀಡಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಬ್ಯಾಂಕಿಗೆ ಭೇಟಿ ನೀಡುವ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಮಾಹಿತಿ, ಇತ್ತೀಚಿನ ಎರಡು ಭಾವಚಿತ್ರ ಹಾಗೂ ಆಧಾರ್ ಪ್ರತಿ ಮತ್ತು ಶಿಫಾರಸ್ಸು ಪತ್ರದ ಪ್ರತಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವಲಯ ಕಚೇರಿ ವ್ಯಾಪ್ತಿಯಲ್ಲಿನ ಸಮುದಾಯದ ಸಂಘಟಕರಾದ ವಲಯ ಕಚೇರಿ 1) ಆರ್.ಪಿ.ನಳಿನಿ ಮೊ.ಸಂ. 9844316512, 2) ಉಷಾಪೂರ್ಣಾ- 9481515527, 3) ಎಂ.ಮುನಿಲಕ್ಷ್ಮಮ್ಮ 9886041972, 4) ರಮೇಶ್- 9449124455, 5)ರಮೇಶ್- 9449124455, 6) ಆಮುನಾ- 9740129562, 7) ಸಂತೋಷ ಕುಮಾರ- 9972634378, 8) ಸಂತೋಷ ಕುಮಾರ- 9972634378, 9) ಆರ್.ಪಿ.ನಳಿನಿ ಮೊ.ಸಂ.9844316512 ಅವರನ್ನು ಸಂಪರ್ಕಿಸಬಹುದು ಎಂದು ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: