ಮೈಸೂರು

ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಮೂರನೇ ಘಟಿಕೋತ್ಸವ : 1,363 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

31 ರ್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ

ಮೈಸೂರು,ಏ.9:- ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಸ್ಥೆಯ ಆವರಣದಲ್ಲಿ ನಡೆದ ಮೂರನೇ ಘಟಿಕೋತ್ಸವ  ಸಮಾರಂಭಕ್ಕೆ  ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜೆಎಸ್ ಎಸ್ ಮಹಾವಿದ್ಯಾಪೀಠದ ಅಧ್ಯಕ್ಷರಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಉನ್ನತ ಶ್ರೇಣಿಯೊಂದಿಗೆ ರ್ಯಾಂಕ್ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣಪತ್ರವನ್ನು ಪ್ರದಾನಿಸಿದರು.

2019-20ನೇ ಸಾಲಿನಲ್ಲಿ 873ಬಿ.ಇ, 214 ಎಂ.ಟೆಕ್, 67ಎಂಸಿಎ, 26ಎಂಎಸ್ಸಿ ಕೆಮಿಸ್ಟ್ರಿ, 183ಎಂಬಿಎ ವಿದ್ಯಾರ್ಥಿಗಳಿಗೆ   ಪದವಿ ಪ್ರಮಾಣಪತ್ರಗಳನ್ನು ಪ್ರದಾನಿಸಲಾಯಿತು. ಬಿಇಯಲ್ಲಿ  ರ್ಯಾಂಕ್ ಪಡೆದ ಸಿಂಚನಾ, ಕೀರ್ತನಾ ಹೆಚ್.ಆರ್, ಮೋನಿಕಾ ಎಂ.ಆರ್, ಸುಮುಖ ಡಿ.ಬಿ, ಪವಿತ್ರಾ ಎಂ, ಭರತ್ ಎಸ್, ನಚಿಕೇತ್, ನಿತ್ಯಶ್ರೀ ಆರ್, ಸಂಜನಾ ಜಿ.ನಾಯ್ಕ್, ಶಾರ್ವರಿ ಆರ್, ವಿಶೃತಾ, ಮನೋಜ್ ಜೆ ಇವರುಗಳಿಗೆ ಬಂಗಾರದ ಪದಕಗಳನ್ನು ಪ್ರದಾನಿಸಲಾಯಿತು.

ಎಂಟೆಕ್ ನಲ್ಲಿ ರ್ಯಾಂಕ್ ಪಡೆದ ಮೋಹಿತ್ ಕೆ, ಅಪೂರ್ವ ಎಸ್ ಕುಲಕರ್ಣಿ, ಶೃತಿ ಪಿ, ತೇಜಸ್ವಿನಿ ಎಂ.ಎಂ, ವಿಜಯೇಂದ್ರ ವಿ.ಕೆ, ದರ್ಶಿನಿ ಡಿ, ಆಸೀಮಾ ಥಯ್ಯಾಬ್, ಮೀರಾ ಗಿರಿಧರ್, ಕೃಪಾ ಹೆಚ್.ಆರ್, ಕೀರ್ತನಾ ಎಸ್ ಎಲ್, ಅರ್ಪಿತಾ ಸಿ, ಪೂಜಾ ಪಿ, ಕೀರ್ತನಾ ಕೆ.ಎಂ ಇವರಿಗೆ ಚಿನ್ನದ ಪದಕ ಪ್ರದಾನಿಸಲಾಯಿತು. ಎಂಸಿಎ ನಲ್ಲಿ ರ್ಯಾಂಕ್ ಪಡೆದ ಐಶ್ವರ್ಯಾ ಸಿ.ಹೆಚ್, ಎಂಎಸ್ ಸಿ ಕೆಮಿಸ್ಟ್ರಿಯಲ್ಲಿ ರ್ಯಾಂಕ್ ಪಡೆದ  ಚೇತನಾ ಎಂ, ಎಂಬಿಎನಲ್ಲಿ ರ್ಯಾಂಕ್ ಪಡೆದ  ಶರ್ಮಾ ಶಿವಾನಿ ಶಿವಕುಮಾರ್, ಕೃತಿಕಾ ಕೆ.ಜೆ, ವಿದ್ಯಾಸಾಗರ್ ಎ, ಸುಶ್ಮಿತಾ ಎನ್ ಇವರುಗಳಿಗೆ ಪದಕ ಪ್ರದಾನಿಸಲಾಯಿತು.

1,363 ವಿದ್ಯಾರ್ಥಿಗಳಿಗೆ ಪದವಿ ಪ್ರದಾನಿಸಲಾಯಿತು. ರಾಷ್ಟ್ರೀಯ ಮಾನ್ಯತಾ ಮಂಡಳಿ ಅಧ್ಯಕ್ಷ ಪ್ರೊ.ಕೆ.ಕೆ.ಅಗರವಾಲ್ ಘಟಿಕೋತ್ಸವ ಭಾಷಣ ಮಾಡಿದರು.

ಈ ಸಂದರ್ಭ ಜೆಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್ ಮಠ್, ತಾಂತ್ರಿಕ ಶಿಕ್ಷಣ ವಿಭಾಗದ ಸಲಹೆಗಾರ ಪ್ರೊ.ಎಂ.ಹೆಚ್.ಧನಂಜಯ್, ಕುಲಸಚಿವ ಡಾ.ಎಸ್.ಎ.ಧನರಾಜ್, ಪ್ರಭಾರ ಕುಲಪತಿ ಪ್ರೊ.ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: