ಮೈಸೂರು

ಉತ್ತಮ ಪತ್ರಕರ್ತನನ್ನು ಹುಟ್ಟುಹಾಕುವ ಸಾಮರ್ಥ್ಯ ಅಂಶಿ ಅವರಿಗಿದೆ: ಪ್ರತಾಪ್ ಸಿಂಹ

ಮೈಸೂರು: ಮೈಸೂರಿನ ಒಡೆಯರ್ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಗಳನ್ನು ಸದಾ ಸ್ಮರಿಸುವ ಅಗತ್ಯವಿದೆ ಎಂದು ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಚಿಂತನ ಚಿತ್ತಾರದ ವತಿಯಿಂದ ನಗರದ ಹೋಟೆಲ್ ಪ್ರೆಸಿಡೆಂಟ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್‍ ಅವರ ‘ಮೈಸೂರು ರಾಜರು ಮತ್ತು ದಸರಾ’ ಹಾಗೂ ಮೈಸೂರೆಂಬ ಪ್ರವಾಸಿ ಸ್ವರ್ಗ’ ಎಂಬ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ತಾನೊಬ್ಬ ಉತ್ತಮ ಪತ್ರಕರ್ತನಾಗಬೇಕೆಂಬ ಕಸನು ಎಲ್ಲರಲ್ಲೂ ಇರುತ್ತದೆ. ಆದರೆ, ಅಂಶಿ ಪ್ರಸನ್ನ ಕುಮಾರ್‍ ಉತ್ತಮ ಪತ್ರಕರ್ತನನ್ನು ಹುಟ್ಟುಹಾಕುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಅನಗತ್ಯ ಪ್ರಶ್ನೆಗಳನ್ನು ಮಾಡುವ ಮೂಲಕ ಪ್ರಚಾರದ ಗೀಳಿಗೆ ಬಿದ್ದಿರುವ ದೃಶ್ಯ ಮಾಧ್ಯಮದ ಪ್ರತಿನಿಧಿಗಳು, ಗ್ಲಾಮರ್ ಕಳೆದುಕೊಂಡಿರುವ ಮುದ್ರಣ ಮಾಧ್ಯಮಗಳ ಮಧ್ಯೆ ವೃತ್ತಿ ಬದ್ಧತೆಯನ್ನಿರಿಸಿಕೊಂಡಿರುವ ಅಂಶಿ ಪ್ರಸನ್ನ ಕುಮಾರ್ ಈ ಕ್ಷೇತ್ರಕ್ಕೆ ಕಳಶಪ್ರಾಯರಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಪ್ರಜಾ ಪ್ರತಿನಿಧಿ ಆಡಳಿತವನ್ನು ತಂದುಕೊಡುವ ಮೂಲಕ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಕಿದ ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಜೀವನ ಸಾಧನೆಯನ್ನು ಒಳಗೊಂಡಿರುವ ಕೃತಿ ಪ್ರಸ್ತುತ ಸಮಾಜಕ್ಕೆ ಸರಿಯಾಗಿ ಹೊಂದುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಟಾರ್ಪಲಿನ್ ಮಾಲೀಕ ವೀರಭದ್ರಪ್ಪ, ವೈಷ್ಣವಿ ಸ್ವೀಟ್ಸ್‍ ಮಾಲೀಕ ಜಿ.ನವೀನ್ ಹಾಗೂ ಕಲಾವಿದ ಜಿ.ನವೀನ್ ಹಾಗೂ ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ ಅವರನ್ನು ಸನ್ಮಾನಿಸಲಾಯಿತು. ಪ್ರೊ.ವಿ.ಪಿ. ನಂಜೇರಾಜೇ ಅರಸ್‍, ಪ್ರದೇಶ ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘದ ಅಧ್ಯಕ್ಷ ಎಂ. ರಾಜೇಂದ್ರ ಮಾತನಾಡಿದರು. ಸಹಕಾರ, ಸಕ್ಕರೆ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್, ಶಾಸಕ ವಾಸು ಉಪಸ್ಥಿತರಿದ್ದರು.

Leave a Reply

comments

Related Articles

error: