ನಮ್ಮೂರುಮೈಸೂರು

ಕಾರ್ಯಾಚರಣೆ ಯಶಸ್ವಿಗೊಳ್ಳಲು ಸೂಕ್ಷ್ಮಾವಲೋಕನದ ಗುಣವಿರಬೇಕು:ವಿಜಯಕುಮಾರ್

ಯಾವುದೇ ಕ್ಷೇತ್ರದ ತಂಡ ತನ್ನ ಕಾರ್ಯಾಚರಣೆಯಲ್ಲಿ ಯಶಸ್ವಿಗೊಳ್ಳಬೇಕಾದರೆ ಸೂಕ್ಷ್ಮಾವಲೋಕನದ ಗುಣದೊಂದಿಗೆ ವೇಗ ಮತ್ತು ನಿಖರತೆ ಇರಬೇಕು ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಭದ್ರತಾ ಸಲಹೆಗಾರ ಹಾಗೂ ಎಸ್ ಟಿಎಫ್ ಮುಖ್ಯಸ್ಥರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಕೆ.ವಿಜಯಕುಮಾರ್ ಹೇಳಿದರು.

ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಸಭಾಂಗಣದಲ್ಲಿ ಶುಕ್ರವಾರ ‘ತಂಡ ಕಾರ್ಯದಲ್ಲಿ ಯಶಸ್ಸು ಸಾಧಿಸುವುದು’ ವಿಷಯ ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.

ಯಾವುದೇ ಕ್ಷೇತ್ರವಾದರೂ ಮಿತ ಸಂಪನ್ಮೂಲವಿದೆ ಎಂದು ಕೈಕಟ್ಟಿ ಕುಳಿತರ ಸಾಧ್ಯವಿಲ್ಲ. ಸಂಪನ್ಮೂಲ ಕೊರತೆ ಸನ್ನಿವೇಶದಲ್ಲಿ ತಂಡದ ನಾಯಕ ಪ್ರಧಾನ ಪಾತ್ರವಹಿಸಬೇಕಾಗುತ್ತದೆ. ನಾಯಕ ಚಾಕಚಕ್ಯತೆಯೊಂದಿಗೆ ತನ್ನ ತಂಡದವರಲ್ಲಿ ಆತ್ಮಸ್ಥೈರ್ಯ ತುಂಬಿ ಕಾರ್ಯಾಚರಣೆಗೆ ಸನ್ನದ್ಧರಾಗುವಂತೆ ಮಾಡಬೇಕು. ದುಡುಕಿನ ಸ್ವಭಾವದಿಂದ ಪೂರ್ವಯೋಜನೆಯಿಲ್ಲದೇ ಮುನ್ನುಗ್ಗಿದರೆ ಯಶಸ್ಸು ಸಾಧ್ಯವಿಲ್ಲ. ನಾಯಕ ತನ್ನೊಳಗಿನ ಸಾಮರ್ಥ್ಯವನ್ನು ಜಾಗೃತಗೊಳಿಸುವ ಜೊತೆ ತಂಡದವರಲ್ಲೂ ಆತ್ಮವಿಶ್ವಾಸ ಮೂಡಿಸಬೇಕು ಎಂದರು.

ಕಠಿಣ ಶ್ರಮ ವಿನಿಯೋಗಿಸಿದಲ್ಲಿ ಯಶಸ್ಸು ಕಷ್ಟವಲ್ಲ. ಮಿತ ಸಂಪನ್ಮೂಲವಿದ್ದಾಗ ಅಭ್ಯಾಸ ಮುಖ್ಯ. ಬುದ್ಧಿಮತ್ತೆ ಮತ್ತು ಪ್ರತಿಭೆ ಇದ್ದಾಗ್ಯೂ ಬದ್ಧತೆ ಮತ್ತು ಪ್ರಾಮಾಣಿಕತೆ ಇಲ್ಲವಾದಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು.

ನಾಯಕತ್ವದ ಗುಣ ಮತ್ತು ತಂಡ ಹೇಗೆ ಯಶಸ್ವಿಯಾಗಬೇಕು ಎನ್ನುವುದನ್ನು ಕೆಲವು ವಿಡಿಯೋ ತುಣುಕು ಪ್ರದರ್ಶಿಸುವ ಮೂಲಕ  ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್, ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಫುಲ್ ಕುಮಾರ್, ಸಿಐಐ ಮೈಸೂರು ಘಟಕದ ಅಧ್ಯಕ್ಷ ಡಾ.ಎನ್ ಮುತ್ತುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: