ಕರ್ನಾಟಕಪ್ರಮುಖ ಸುದ್ದಿ

ಕಾಂಗ್ರೆಸ್ ಶೀಘ್ರದಲ್ಲೇ ಅಡ್ರೆಸ್ ಇಲ್ಲದಂತೆ ಆಗಲಿದೆ: ಸಿಎಂ ಬಿ.ಎಸ್.ಯಡಿಯೂರಪ್ಪ

ರಾಯಚೂರು,ಏ.10- ಕಾಂಗ್ರೆಸ್ ಪಕ್ಷ ಶೀಘ್ರದಲ್ಲೇ ಅಡ್ರೆಸ್ ಇಲ್ಲದಂತೆ ಆಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶನಿವಾರ ಮಸ್ಕಿ ತಾಲೂಕಿನ ತುರ್ವಿಹಾಳನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಕುತಂತ್ರದ ರಾಜಕಾರಣ ಬಹುಕಾಲ ಉಳಿಯದು. ಕಾಂಗ್ರೆಸ್ ಪಕ್ಷ ದೇಶದಲ್ಲಿ ಚುನಾವಣೆಯಿಂದ ಚುನಾವಣೆಗೆ ಸೋಲುಂಡು ಶೀಘ್ರ ಅಡ್ರೆಸ್ ಇಲ್ಲದಂತೆ ಆಗಲಿದೆ ಕಾಯಿರಿ ಎಂದರು.

ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್‌ಗೌಡ ಪಾಟೀಲ್‌ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಕಾಂಗ್ರೆಸ್ ಕ್ಷೇತ್ರದಲ್ಲಿ ವಿಷ ಬೀಜ ಬಿತ್ತುತ್ತಿದೆ. ಕಾಂಗ್ರೆಸ್ ಮುಳುಗಿ ಹೋದ ಪಕ್ಷವಾಗಿದೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಇನ್ನೆರೆಡು ವರ್ಷಗಳಲ್ಲಿ ಕರ್ನಾಟಕ ಮಾದರಿ ರಾಜ್ಯ ಮಾಡುತ್ತೇನೆ. 33 ಸಾವಿರ ಕೋಟಿ ಮಹಿಳೆಯರಿಗೋಸ್ಕರ ಬಜೆಟ್‌ನಲ್ಲಿ ತೆಗೆದಿಟ್ಟಿದ್ದೇನೆ. ಸದ್ಯದಲ್ಲೇ ಭತ್ತ, ಜೋಳ ಖರೀದಿ ಕೇಂದ್ರಗಳನ್ನ ತೆರೆಯುತ್ತೇವೆ. ಚುನಾವಣೆ ಮುಗಿದ ಮೇಲೆ ತುರ್ವಿಹಾಳ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 1,500 ಕೋಟಿ ತೆಗೆದಿಟ್ಟಿದ್ದೇನೆ. ಬಸವಕಲ್ಯಾಣ ನಗರದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ ಕೊಟ್ಟಿದ್ದೇನೆ. ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಮಾಡಲಾಗಿದೆ. ಕಾಗಿನೆಲೆ ಪೀಠಕ್ಕೆ ಅಭಿವೃದ್ಧಿಗೆ 10 ಕೋಟಿ ಕೊಟ್ಟಿದ್ದೇನೆ. ಒಂದು ಓಟು ವ್ಯತ್ಯಯವಾಗದಂತೆ ನಮಗೆ ಮತ ನೀಡಿ. ನಾನು ಕೊಟ್ಟ ಭರವಸೆ ಯಾವತ್ತೂ ತಪ್ಪಿಲ್ಲ ಎಂದು ಹೇಳಿದರು. (ಎಂ.ಎನ್)

Leave a Reply

comments

Related Articles

error: