ದೇಶಪ್ರಮುಖ ಸುದ್ದಿ

ದೇಶದಲ್ಲಿ 1.68 ಲಕ್ಷ ಕೊರೊನಾ ಪ್ರಕರಣ : 904 ಮಂದಿ ಸಾವು

ದೇಶ(ನವದೆಹಲಿ)ಏ.12:- ಕೊರೋನಾ ವೈರಸ್ ನ ಎರಡನೇ ಅಲೆಯು ಪ್ರತಿದಿನ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಸೋಮವಾರ ಕೊರೋನಾ ಸೋಂಕಿನ ಪ್ರಕರಣವು 1 ಕೋಟಿ 35 ಲಕ್ಷ ದಾಟಿದೆ.  ಆರೋಗ್ಯ ಸಚಿವಾಲಯದ ಇತ್ತೀಚಿನ ವರದಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ಒಂದು ಲಕ್ಷ 68 ಸಾವಿರ ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 904 ಮಂದಿ ಸಾವನ್ನಪ್ಪಿದ್ದಾರೆ.   ಈ ಅವಧಿಯಲ್ಲಿ 75 ಸಾವಿರಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ.

ಒಟ್ಟು   ಒಂದು ಕೋಟಿ 35 ಲಕ್ಷ 27 ಸಾವಿರ 717 ಪ್ರಕರಣ ಪತ್ತೆಯಾಗಿದ್ದು,  ಒಂದು ಕೋಟಿ 21 ಲಕ್ಷ 56 ಸಾವಿರ 529ಮಂದಿ ಗುಣಮುಖರಾಗಿದ್ದಾರೆ.  ಹನ್ನೆರಡು ಲಕ್ಷದ ಒಂದು ಸಾವಿರದ ಒಂಭತ್ತು ಸಕ್ರಿಯ ಪ್ರಕರಣಗಳಿವೆ.  1 ಲಕ್ಷ 70 ಸಾವಿರ 179 ಸಾವು ಸಂಭವಿಸಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: