ಮೈಸೂರು

ಕೋವಿಡ್-19 : ನಿರೋಧಕ ಲಸಿಕೆ ಪಡೆದ ಸಂಸದ ಪ್ರತಾಪ್ ಸಿಂಹ

ಮೈಸೂರು,ಏ.12:- ಮೈಸೂರಿನ ಮೇಟಗಳ್ಳಿ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ಸಂಸದ ಪ್ರತಾಪ್ ಸಿಂಹ ಅವರು ಕೋವಿಡ್-19 ನಿರೋಧಕ   ಲಸಿಕೆ ಪಡೆದರು.

45ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯವಿದ್ದು ದಯವಿಟ್ಟು ಅರ್ಹ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ಲಸಿಕೆ ಪಡೆಯಬೇಕೆಂದು ಈ ವೇಳೆ ವಿನಂತಿಸಿದರು.   ಮೈಸೂರು ಜಿಲ್ಲೆಯಲ್ಲಿ ನಾಲ್ಕು ಲಕ್ಷ ಲಸಿಕೆಯನ್ನು ಹಾಕಿಸಬೇಕೆಂದು ಕೊಟ್ಟಿದ್ದ ಟಾರ್ಗೆಟ್ ನಲ್ಲಿ ಹೆಚ್ಚು ಕಡಿಮೆ ನಾಲ್ಕು ಲಕ್ಷದ ಸಮೀಪಕ್ಕೆ ಬಂದಿದ್ದೇವೆ. ಪ್ರತಿನಿತ್ಯ 25ಸಾವಿರ ಲಸಿಕೆಯನ್ನು ಹಾಕಿಸಬೇಕೆಂದು ಟಾರ್ಗೆಟ್ ಇದೆ. ಪ್ರತಿನಿತ್ಯ ನಾವು 35ಸಾವಿರಕ್ಕೂ ಹೆಚ್ಚು ಲಸಿಕೆಗಳನ್ನು ನೀಡುತ್ತಿದ್ದೇವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಹಾಗೂ ಲಸಿಕೆ ಉತ್ಸವದಲ್ಲಿ ಮೈಸೂರು ಮುಂಚೂಣಿಯಲ್ಲಿದೆ. ಇದಕ್ಕೆ ಕಾರಣ ಕರ್ತರಾದ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ಅವರಿಗೆ, ಡಿಹೆಚ್ ಒ ಹಾಗೂ ಎಲ್ಲಾ ಕೊರೋನಾ ವಾರಿಯರ್ಸ್ ಗೆ ಧನ್ಯವಾದಗಳು ಎಂದು ಟ್ವೀಟರ್ ನಲ್ಲಿ ಅವರು ಬರೆದುಕೊಂಡಿದ್ದಾರೆ.

Leave a Reply

comments

Related Articles

error: