ಮೈಸೂರು

ಕೊರೋನಾ ಲಸಿಕೆ ಹಾಕಿಸಿಕೊಳ್ಳುವಂತೆ ಪಾಲಿಕೆ ಸದಸ್ಯ ಜೆ.ಗೋಪಿ ಮನವಿ

ಮೈಸೂರು,ಏ.12:- ವಾರ್ಡ್ ನಂ 43 ಮೈಸೂರು ನಗರ ಪಾಲಿಕೆ ಸದಸ್ಯರಾದ ಜೆ.ಗೋಪಿ ಅವರು ವಾರ್ಡ್ ಜನತೆಗೆ ಕೊರೋನಾ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಕೋವಿಡ್ 19 ಹಿನ್ನಲೆ ಸರ್ಕಾರ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ. ಆದ್ದರಿಂದ ವಾರ್ಡ್ ನಂ 43 ಮೈಸೂರು ನಗರ ಪಾಲಿಕೆ ಸದಸ್ಯರಾದ ಜೆ.ಗೋಪಿ ಅವರು ವಾರ್ಡ್ ಜನರ ಹಿತ ದೃಷ್ಟಿಯಿಂದ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಕಾರ್ಡ್ ನೀಡುವ ಮೂಲಕ ಅರಿವು ಮೂಡಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜಿಲ್ಲಾಡಳಿತ ,ಮೈಸೂರು ಮಹಾನಗರ ಪಾಲಿಕೆ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪ್ರತಿ ವಾರ್ಡ್ ಗಳಿಗೆ 300 ಕೋವಿಡ್ 19 ಲಸಿಕಾ ಸರ್ಟಿಫಿಕೇಟ್ ನೀಡಿದ್ದಾರೆ.ಅದರಂತೆ 43 ನೇ ವಾರ್ಡ್ ನಲ್ಲಿರುವ 45 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: