ಮೈಸೂರು

ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ ವತಿಯಿಂದ ಜನರಿಗೆ ಉಚಿತವಾಗಿ ಮಾವು -ಬೇವು ವಿತರಣೆ

ಮೈಸೂರು,ಏ.12:-  ಯುಗಾದಿ ಹಬ್ಬದ ಪ್ರಯುಕ್ತ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ
(ನಗರ ಮಂಡಲ) ವತಿಯಿಂದ ಜನರಿಗೆ ಉಚಿತವಾಗಿ ಮಾವು -ಬೇವುಗಳನ್ನು ನೀಡಿ ಶುಭಾಶಯ ಕೋರಲಾಯಿತು.

ನಂತರ ನಾಡಿನ ಅನ್ನದಾತ ರೈತನಿಂದ ನೇರ ಖರೀದಿ ಮಾಡಿ ಕೊರೋನ ಸಂಕಷ್ಟದಲ್ಲಿರುವ ಜನತೆಗೆ ಅತಿ ಕಡಿಮೆ (ಕೆ ಜಿ10) ದರದಲ್ಲಿ ದಿನ ಬಳಕೆ ತರಕಾರಿಗಳನ್ನು ನೀಡಲಾಯಿತು.  ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ ಎಸ್ ಶ್ರೀವತ್ಸ  ಬಿಜೆಪಿ ಚಾಮುಂಡೇಶ್ವರಿ ರೈತ ಮೋರ್ಚಾ ಈ ದಿನ ರೈತ ಮತ್ತು ಜನತೆಗೆ ಕೊಂಡಿಯಾಗಿ ಕೆಲಸ ಮಾಡಿದೆ. ಇದು ಅತ್ಯಂತ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಸಾವಯವ ಕೃಷಿ ಉತ್ಪನ್ನಗಳ ಬಳಕೆಗೆ ಮತ್ತು ಟೆರೇಸ್ ಗಾರ್ಡನ್ ಗೆ ಹೆಚ್ಚಿನ ಉತ್ತೇಜನ ನೀಡಿ ಎಂದು ತಿಳಿಸಿದರು, ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಧ್ಯಕ್ಷ ಬಿ ಎಂ ರಘು, ನಗರ ರೈತ ಮೋರ್ಚಾ ಅಧ್ಯಕ್ಷ ದೇವರಾಜ್, ನಗರ ಬಿಜೆಪಿ ಪ್ರದಾನ ಕಾರ್ಯದರ್ಶಿ ಗಿರಿಧರ್, ಉಪಾಧ್ಯಕ್ಷ ದಿನೇಶ್, ಮಂಡಲ ರೈತ ಮೋರ್ಚಾ ಅಧ್ಯಕ್ಷ ಕಾಂತರಾಜ್ ಅರಸ್,ಮಂಡಲ ಬಿಜೆಪಿ ಪ್ರದಾನ ಕಾರ್ಯದರ್ಶಿ ಹೆಚ್ ಜಿ ರಾಜಮಣಿ, ಈರೇಗೌಡ, ರೈತ ಮೋರ್ಚಾ ಪ್ರದಾನ ಕಾರ್ಯದರ್ಶಿ ರುಕ್ಮಿಣಿ, ಪ್ರೀತಮ್, ನಗರ ರೈತ ಮೋರ್ಚಾ ಪ್ರದಾನ ಕಾರ್ಯದರ್ಶಿ ಕಾರ್ತಿಕ್ ಗೌಡ, ಮಂಡಲ ಉಪಾಧ್ಯಕ್ಷ ರಾಕೇಶ್ ಭಟ್ ಶಶಿಕಾಂತ್, ಗಿರೀಶ್, ರಮ್ಯಾಪುನೀತ್, ನಾಗರಾಜ್ ಜನ್ನು, ನವೀನ್, ವಿವಿಧ ಮೋರ್ಚಾಗಳ ಶುಭಶ್ರೀ, ಎಸ್ ಮದು, ರಾಚಪ್ಪಾಜಿ, ಭಾಗ್ಯಲತಾ, ನಾಗೇಶ್, ಗೀತಾ ಮಹೇಶ್, ನಾಗಪ್ರಿಯ, ಶ್ರುತಿ, ಸವಿತ, ರಜನೀಕಾಂತ್, ಸೌಮ್ಯ, ಕವಿತ, ರಾಜು  ಮುಂತಾದ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: