ಮೈಸೂರು

ಎನ್‍ ಆರ್ ಫೌಂಡೇಷನ್‍ನಿಂದ 2 ನೇ ಹಂತದ ಪ್ರೊಜೆಕ್ಟ್ ಪ್ರೇರೇಪಣ ಅಡಿಯಲ್ಲಿ ಇಂದು 9 ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ

ಮೈಸೂರು, ಏ. 13:- ಎನ್ ಆರ್ ಗ್ರೂಪ್ ನ ಜನೋಪಕಾರಿ ಅಂಗವಾದ ಎನ್‍ಆರ್ ಫೌಂಡೇಷನ್‍ನಿಂದ 2 ನೇ ಹಂತದ ಪ್ರೊಜೆಕ್ಟ್ ಪ್ರೇರೇಪಣ ಅಡಿಯಲ್ಲಿ ಇಂದು 9 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಹಸ್ತಾಂತರಿಸಲಾಗಿದೆ.
ಪ್ರೊಜೆಕ್ಟ್ ಪ್ರೇರೇಪಣ ಅಡಿಯಲ್ಲಿ ನಡೆದ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಮೈಸೂರಿನ ಪ್ರತಿ 7 ಹಿಂದುಳಿದ ಪ್ರದೇಶಗಳ ಸುಮಾರು 20 ಮಹಿಳೆಯರು ಭಾಗವಹಿಸಿ, ಇದರ ಲಾಭ ಪಡೆದರು. ಪ್ರೊಜೆಕ್ಟ್ ಪ್ರೇರೇಪಣ ತನ್ನಎರಡನೇ ಹಂತದ ಅಡಿಯಲ್ಲಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲು ಹೊಲಿಗೆ ಯಂತ್ರಗಳನ್ನು ಖರೀದಿಸಿತ್ತು. ನಂತರ ಅಗತ್ಯವಿರುವ ಮಹಿಳೆಯರಿಗೆ ಯಂತ್ರಗಳನ್ನು ಹಸ್ತಾಂತರಿಸಲು ಆಡಳಿತ ನಿರ್ಧರಿಸಿತ್ತು. ಇದರಿಂದ ಪೂರೈಸಲಾದ ಕೌಶಲ್ಯ ಬಳಸುವ ಮೂಲಕ ಸಭ್ಯ ಜೀವನಾಧಾರ ಹೊಂದಲು ಮಹಿಳೆಯರು ತಮಗೆ ನೀಡಲಾದ ತರಬೇತಿಯನ್ನು ಉಪಯೋಗಿಸಿಕೊಳ್ಳಬಹುದಾಗಿದೆ.

ಎನ್‍ ಶರ ಗ್ರೂಪ್ ನ ಚೇರ್‍ಮನ್‍ ಗುರು ಮತ್ತು ಎನ್‍ಆರ್ ಗ್ರುಪ್ ನ ನಿರ್ದೇಶಕರಾದ ಪವನ್‍ ರಂಗ ಅವರು ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಹಸ್ತಾಂತರಿಸಿದರು. ಸ್ವಾಮಿ ವಿವೇಕಾನಂದ ಯುತ್ ಮೂವ್‍ ಮೆಂಟ್(ಎಸ್‍ವಿವೈಎಮ್)ಈ ಯೋಜನೆಯ ಅನುಷ್ಠಾನ ಪಾಲುದಾರರಾಗಿರುತ್ತಾರೆ.

ಎನ್‍ ಆರ್ ಗ್ರೂಪ್ ನ ನಿರ್ದೇಶಕರಾದ ಪವನ್‍ ರಂಗ ಅವರು ಮಾತನಾಡಿ,“ಹೊಲಿಗೆಯಂತ್ರಗಳಲ್ಲಿ ಅವರ ಉತ್ಕೃಷ್ಟ ಕಲಿಕಾ ಕೌಶಲ್ಯಗಳು ಮತ್ತು ಹೊಲಿಗೆ ಯಂತ್ರ ಪಡೆಯಲು ಅರ್ಹತೆ ಸಂಪಾದಿಸಿದ್ದಕ್ಕಾಗಿ 9 ಮಹಿಳೆಯರಿಗೆ ಯಂತ್ರಗಳನ್ನು ನೀಡಲು ನಾವು ನೀಡಿರುವುದು ಎನ್‍ ಆರ್ ಗ್ರೂಫ್ ನಲ್ಲಿ ನಮಗೆ ಹೆಮ್ಮೆಯ ಕ್ಷಣವಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರು ಮತ್ತು ಬಾಲಕಿಯರಿಗೆ ಕೌಶಲ್ಯಗಳನ್ನು ಕಲಿಸಿಕೊಡುವಲ್ಲಿ ಪ್ರೊಜೆಕ್ಟ್ ಪ್ರೇರೇಪಣ ಗಮನ ಕೇಂದ್ರೀಕರಿಸಿದೆ. ಜೊತೆಗೆತಾವು ವಾಸಿಸುವ ಸಮಾಜವನ್ನು ಉತ್ತಮ ಪಡಿಸುವುದಕ್ಕೆ ಮತ್ತು ತಮಗಾಗಿ ದುಡಿಯುವುದಕ್ಕೆ ಅವರನ್ನು ಸಿದ್ಧಪಡಿಸುತ್ತಿದೆ. ಸಭ್ಯ ಜೀವನಾಧಾರ ಹೊಂದಲು ಈ ಬಾಲಕಿಯರಿಗೆ ಹೊಲಿಗೆ ಯಂತ್ರಗಳು ನೆರವಾಗುವುದಲ್ಲದೇ, ಈ ಬಾಲಕಿಯರು ತಮ್ಮ ಸ್ವಂತ ಸಮುದಾಯಗಳ ಮೇಲೆ ಪರಿಣಾಮ ಉಂಟು ಮಾಡಬಹುದಾಗಿದೆ. ಹೊಲಿಗೆಯನ್ನು ಕಲಿಯುವುದರಿಂದ ಹಿಡಿದು ಕೌಶಲ್ಯ ಪೂರ್ಣ ದರ್ಜಿಗಳಾಗುವ ಅವರ ಪ್ರಯಾಣದ ಭಾಗವಾಗಿರಲು ನಾವು ಹೆಮ್ಮೆ ಪಡುತ್ತೇವೆ”ಎಂದರು.

ಮೈಸೂರಿನ ಹಿಂದುಳಿದ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಅವರ ಮಕ್ಕಳು ತಾವು ಮತ್ತು ತಮ್ಮ ಕುಟುಂಬಗಳು ಬದುಕುವುದಕ್ಕಾಗಿ ಜೀವನಾಧಾರವನ್ನು ಸಂಪಾದಿಸುವುದರೊಂದಿಗೆ ಜೀವನ ಮಟ್ಟವನ್ನು ಮೇಲೇರಿಸಿಕೊಳ್ಳುವಲ್ಲಿ ನೆರವಾಗುವ ಉದ್ದೇಶದೊಂದಿಗೆ 2006ರಲ್ಲಿ ಪ್ರೊಜೆಕ್ಟ್ ಪ್ರೇರೇಪಣದ ಮೊದಲ ಹಂತವನ್ನು ಎನ್‍ ಆರ್ ಫೌಂಡೇಷನ್ ಆರಂಭಿಸಿತ್ತು. ಆರೋಗ್ಯ, ಶಿಕ್ಷಣ ಮತ್ತುಯುವಜನರ ಹಾಗೂ ಮಹಿಳೆಯರ ಸಾಮಾಜಿಕ–ಆರ್ಥಿಕ ಸಬಲೀಕರಣಗಳ ಮೂಲಕ ಮೈಸೂರಿನ 7 ಹಿಂದುಳಿದ ಪ್ರದೇಶಗಳ ಸುಸ್ಥಿರ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದಕ್ಕಾಗಿಎರಡನೇ ಹಂತ 2016ರಲ್ಲಿ ಆರಂಭವಾಗಿತ್ತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: