ಮೈಸೂರು

ಸಾಲ ಕೊಡಿಸುವುದಾಗಿ ವಂಚನೆ : ನಜರ್ ಬಾದ್ ಠಾಣೆಯಲ್ಲಿ ದೂರು

ಬ್ಯಾಂಕಿನಿಂದ ಸಾಲ ಕೊಡಿಸುವುದಾಗಿ ನಂಬಿಸಿ 6.60ಲಕ್ಷರೂ. ಸಾಲ ಪಡೆದು ಮಹಿಳಾ ಸ್ವಸಹಾಯ ಸಂಘದವರಿಗೆ ವಂಚಿಸಿರುವ ಕುರಿತು ನಜರ್ ಬಾದ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಘವೇಂದ್ರ ನಗರದ ಸಂಘದ ಸದಸ್ಯೆ ಭಾರತಿ ಎಂಬವರ ಮನೆಯಲ್ಲಿ ತಾರ, ರೇವತಿ, ಮಾಲತಿ, ವಿಜಯಲಕ್ಷ್ಮಿಎಂಬವರು ಅಹಲ್ಯಾದೇವಿ, ಬೇತಾಳೇಶ್ವರಿ ಮತ್ತು ಸುವರ್ಣ ಸ್ವಸಹಾಯ ಸಂಘ ಎಂಬ ಮಹಿಳಾ ಸ್ವಸಹಾಯ ಸಂಘಗಳನ್ನು ತೆರೆದು ನಡೆಸುತ್ತಿದ್ದರು. ಸಂಘದಲ್ಲಿ 15 ಮಂದಿ ಸದಸ್ಯರಿದ್ದು, ಪ್ರತಿತಿಂಗಳೂ 200ರೂ.ನಂತೆ ಎಲ್ಲಾ ಸದಸ್ಯರು ಆರು ತಿಂಗಳವರೆಗೆ ಹಣವನ್ನು ಉಳಿತಾಯ ಹಣವಾಗಿ ಸಂಘಕ್ಕೆ ಕಟ್ಟುತ್ತಿದ್ದರು. ಈ ಹಣವನ್ನು ಸುಮತಿ ಬ್ಯಾಂಕ್ ನ ುಳಿತಾಯ ಖಾತೆಗೆ ಹಣ ಕಟ್ಟುತ್ತೇನೆಂದು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಆರು ತಿಂಗಳ ನಂತರ ಸುಮತಿ ಸಂಘದಿಂದ ಸಿದ್ದಾರ್ಥನಗರ ಶಾಖೆಯ ಎಸ್ ಬಿಎಂ, ಕಾರ್ಪೋರೇಷನ್, ವಿಜಯಬ್ಯಾಂಕ್ ನಲ್ಲಿ ಸಾಲ ಕೊಡಿಸುವುದಾಗಿ ರೇವತಿ, ವಿಜಯಲಕ್ಷ್ಮಿ, ಮಾಲತಿ ಅವರಿಂದ ಅರ್ಜಿ ಪಡೆದು ಬ್ಯಾಂಕ್ ಚೆಕ್ ಗಳಿಗೆ ಸಹಿ ಹಾಕಿಸಿಕೊಂಡಿದ್ದರು ಎನ್ನಲಾಗಿದೆ.

ವರ್ಷ ಕಳೆದರೂ ಸಾಲ ಕೊಡಿಸದಿರುವುದರಿಂದ ಅನುಮಾನಗೊಂಡು ಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ ಬ್ಯಾಂಕ್ ಗಳಲ್ಲಿ 2014ನೇ ಸಾಲಿನಲ್ಲಿ 6.60ಲಕ್ಷರೂ. ಸಾಲವಾಗಿ ಪಡೆದುಕೊಂಡಿದ್ದು, ಸಾಲದ ಹಣವನ್ನು  ಯಾರಿಗೂ ನೀಡದೇ ಸಾಲವನ್ನು ತೀರಿಸದೇ ಮೋಸ ಮಾಡಿದ್ದಾರೆ. ಸಾಲ ಮರುಪಾವತಿ ಮಾಡುವಂತೆ ಬ್ಯಾಮಕಿನಿಂದ ನೋಟೀಸ್ ಬಂದಿದ್ದು, ನಂಬಿಕೆ ದ್ರೋಹ ಮಾಡಿರುವ ಸುಮತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: