ಮೈಸೂರು

ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲವಾಗಿ ನಿಂತ 18 ಮಂದಿ ಮಹಿಳೆಯರ ವಿರುದ್ಧ ಪ್ರಕರಣ ದಾಖಲು

ಮೈಸೂರು,ಏ.14:-   ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲವಾಗಿ ನಿಂತ 18 ಮಂದಿ ಮಹಿಳೆಯರ ವಿರುದ್ಧ ಕಲಂ 107ರ ಅಡಿ ಪ್ರಕರಣ ದಾಖಲಾಗಿದೆ.

ಹುಣಸೂರು ಬಸ್ ಡಿಪೋ ಬಳಿ ಜಮಾವಣೆಗೊಂಡ 50ಕ್ಕೂ ಹೆಚ್ಚು ಮಹಿಳೆಯರು ತಟ್ಟೆ, ಲೋಟ ಬಡಿದು ಪ್ರತಿಭಟಿಸಿದ್ದರು. ಸರ್ಕಾರ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿರುದ್ಧ ಧಿಕ್ಕಾರ ಕೂಗಿದ್ದರು.

18 ಮಹಿಳೆಯರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ವೇಳೆ ನಗರ ಠಾಣೆ ಇನ್ಸ್ಪೆಕ್ಟರ್ ರವಿ ಮನವೊಲಿಸಿದರಾದರೂ ಮಹಿಳೆಯರು ಪಟ್ಟು ಸಡಿಲಿಸದ ಕಾರಣ ಅನಿವಾರ್ಯವಾಗಿ 18 ಮಂದಿ ಮಹಿಳೆಯರನ್ನು ವಶಕ್ಕೆ ಪಡೆದು ಕಲಂ 107ರಡಿಯಲ್ಲಿ ಪ್ರಕರಣ ದಾಖಲಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು. ಹುಣಸೂರು ಡಿಪೋದಿಂದ ಕೇವಲ 3 ಬಸ್​ಗಳು ಮಾತ್ರ ಸಂಚರಿಸಿವೆ. ಒಂದು ಬಸ್​ಗೆ ನಿರ್ವಾಹಕರ ಕೊರತೆಯಿಂದ ಸ್ಥಗಿತಗೊಳಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: