ಮೈಸೂರು

ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಹಿನ್ನೆಲೆ : ಪುಷ್ಪಾರ್ಚನೆಗೈದು ಗೌರವ ಸಮರ್ಪಿಸಿದ ಸಚಿವ ಎಸ್ ಟಿ ಸೋಮಶೇಖರ್

ಮೈಸೂರು,ಏ.14:- ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಕೊಡುಗೆ ಇದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.‌ಟಿ.ಸೋಮಶೇಖರ್ ಅವರು ಹೇಳಿದರು.

ಬುಧವಾರ ಪುರಭವನದ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ಜಯಂತಿ ಪ್ರಯುಕ್ತ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಅವರು ಡಾ. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ನೀಡಿದ ಆದ್ಯತೆ, ಮೀಸಲಾತಿಯ ಕೊಡುಗೆಯನ್ನು ಸ್ಮರಿಸಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ, ಗೌರವ ಸಲ್ಲಿಸಿದ್ದಾರೆ ಎಂದು ಹೇಳಿದರು.

ನಗರದ ಟೌನ್ ಹಾಲ್  ಬಳಿ ಇರುವ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ  ಹಾರ ಹಾಕಿದರು. ಬಳಿಕ ನಾಡಿನ ಜನತೆಗೆ ಅಂಬೇಡ್ಕರ್ ಜಯಂತಿಯ ಶುಭ ಕೋರಿದರು. ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಲ್.ನಾಗೇಂದ್ರ, ರಾಮದಾಸ್, ಹರ್ಷವರ್ಧನ್, ವಿಧಾನಪರಿಷತ್ ಸದಸ್ಯ ಮರೀತಿಬ್ಬೇಗೌಡ, ಜಿ.ಪಂ ಅಧ್ಯಕ್ಷೆ ಪರಿಮಳ ಶಾಮ್, ಮೇಯರ್ ರುಕ್ಮಿಣಿ ಮಾದೇಗೌಡ ಸೇರಿದಂತೆ ಹಲವರು ಪುಷ್ಪಾರ್ಚನೆಗೈದು ಗೌರವ ಸಮರ್ಪಿಸಿದರು.

ಅಂಬೇಡ್ಕರ್ ಜಯಂತಿಯ  ಸಂದರ್ಭದಲ್ಲಿ ಹೆಜ್ಜೇನಿನ ಆತಂಕ ಎದುರಾಗಿತ್ತು. ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಹಲವರ ಮೇಲೆ   ಹೆಜ್ಜೇನು ದಾಳಿ ನಡೆಸಿತ್ತು. ಹೆಜ್ಜೇನುಗಳ ದಾಳಿಗೆ ಜನರು ಸ್ಥಳದಿಂದ   ಓಡಿದರು. ಹೆಜ್ಜೇನು ದಾಳಿ ವಿಚಾರ ಕೇಳಿ   ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು. ಕೆಲ ಕಾಲ ಟೌನ್ ಹಾಲ್ ಬಳಿ ಆತಂಕದ ವಾತವರಣ ನಿರ್ಮಾಣವಾಗಿತ್ತು. ಆತಂಕ ದೂರವಾದ ಬಳಿಕ ಪ್ರಾರಂಭವಾದ ಕಾರ್ಯಕ್ರಮ ಆರಂಭವಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: