ಮನರಂಜನೆ

2.0 ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ

ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಬಹುನಿರೀಕ್ಷಿತ ಚಿತ್ರ ‘2.0’ ದ ಬಿಡುಗಡೆಯ ದಿನಾಂಕ ಮುಂದೂಡಲ್ಪಟ್ಟಿದ್ದು 2018 ರ ಜನವರಿ 25 ಕ್ಕೆ ಬಿಡುಗಡೆಯಾಗಲಿದೆಯಂತೆ.

ಈ ವರ್ಷದ ದೀಪಾವಳಿಯ ದಿನದಂದು 2.0 ಚಿತ್ರವನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ವಿಶ್ವದರ್ಜೆಯ ವಿಎಫ್ಎಕ್ಸ್ ಗಾಗಿ ಕೆಲಸ ಮಾಡುತ್ತಿರುವುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಅಮೇರಿಕಾದಲ್ಲಿ ವಿಶ್ಯುಯಲ್ ಎಫೆಕ್ಟ್ ಹೊಂದಿರುವ ಭಾಗದ ಕೆಲಸ ನಡೆಯುತ್ತಿದ್ದು ಚಿತ್ರತಂಡ ಕಾರ್ಯನಿರತವಾಗಿದೆ. ಈ ಹಿನ್ನೆಲೆಯಲ್ಲಿ 2018 ರ ಜ.25 ಕ್ಕೆ  ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

2.0 ಚಿತ್ರವು 2010 ರಲ್ಲಿ ಬಿಡುಗಡೆಯಾದ ಎಂಥಿರನ್-2 ಸೀಕ್ವೆಲ್ ಚಿತ್ರವಾಗಿದ್ದು, 450 ಕೋಟಿ ಬಜೆಟ್ ಹಾಕಲಾಗಿದೆ. ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ನಟಿಸಿದ್ದಾರೆ. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: