
ದೇಶಪ್ರಮುಖ ಸುದ್ದಿಮನರಂಜನೆ
ಏ.22 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ನಟ ವಿಷ್ಣು ವಿಶಾಲ್- ಜ್ವಾಲಾ ಗುಟ್ಟಾ
ಚೆನ್ನೈ,ಏ.14-ತಮಿಳು ನಟ ವಿಷ್ಣು ವಿಶಾಲ್ ಅವರೊಂದಿಗೆ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಏ.22 ರಂದು ಇವರಿಬ್ಬರು ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಈ ಬಗ್ಗೆ ನಟ ವಿಷ್ಣು ವಿಶಾಲ್ ಅವರು ಟ್ವಿಟ್ವರ್ ನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಮದುವೆ ಆಮಂತ್ರಣ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.
ಕಳೆದ ಸೆಪ್ಟೆಂಬರ್ 7ರಂದು ಜ್ವಾಲಾ ಗುಟ್ಟ ಹುಟ್ಟುಹಬ್ಬದ ದಿನ ವಿಷ್ಣು ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಇದಕ್ಕೆ ಜ್ವಾಲಾ ಗುಟ್ಟ ಸಹ ಓಕೆ ಅಂದಿದ್ದರು. ಇದೀಗ ಏ.22 ರಂದು ಆಪ್ತರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ.
ತಮಿಳುನಾಡಿನ ವೆಲ್ಲೂರು ಮೂಲದ 36 ವರ್ಷದ ವಿಶಾಲ್ ಹಲವಾರು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2009ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟ 17ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)