ಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ಖ್ಯಾತ ನಟ ರಾಹುಲ್ ರಾಯ್ ಮತ್ತವರ ಕುಟುಂಬಕ್ಕೆ ವಕ್ಕರಿಸಿದ ಕೊರೋನಾ   

ದೇಶ(ಮುಂಬೈ)ಏ.15:- ಕೊರೋನಾ ವೈರಸ್ ದೇಶಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಏತನ್ಮಧ್ಯೆ, ಅನೇಕ ಬಾಲಿವುಡ್ ಖ್ಯಾತನಾಮರು ಸಹ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

ಬಾಲಿವುಡ್‌ ನ ಪ್ರಸಿದ್ಧ ನಟ ರಾಹುಲ್ ರಾಯ್ ಗೆ ಕೂಡ ಕೊರೋನಾ ಸೋಂಕು ತಗುಲಿದೆ. ಸೋಷಿಯಲ್ ಮೀಡಿಯಾ ಮೂಲಕ ಈ ಬಗ್ಗೆ ಅವರು ಮಾಹಿತಿ ನೀಡಿದ್ದು,  ಅವರೊಂದಿಗೆ ಅವರ ಸಹೋದರಿ ಮತ್ತು ಸೋದರಮಾವನಲ್ಲಿ ಕೂಡ ಕೊರೋನಾ ಸೋಂಕು ಪತ್ತೆಯಾಗಿದೆ.    “ನನ್ನ ಕೊರೋನಾ ವೈರಸ್ ಪರೀಕ್ಷೆ ಸಕಾರಾತ್ಮಕವಾಗಿದೆ. ನಾನು ಮನೆಯಿಂದ ಹೊರಬರದೆ ಹೇಗೆ ಬಂದಿದೆ ಎಂದು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ ಆದರೆ ಇನ್ನೂ ನಾನು ಸಕಾರಾತ್ಮಕವಾಗಿ ಕಂಡುಬಂದಿದ್ದೇನೆ” ಎಂದು   ಇನ್ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡ ಅವರು, “ನನ್ನ ನೆರೆಹೊರೆಯವರು ಕೊರೋನಾ ಸೋಂಕಿಗೆ ಒಳಗಾಗಿದ್ದರು.   ಅದರ ನಂತರ ಸೀಲ್ ಡೌನ್ ಮಾಡಲಾಗಿತ್ತು. ಇದರ ನಂತರ ನಾವು ಏಪ್ರಿಲ್ 7 ರಂದು ಆರ್ ಟಿಪಿಸಿಆರ್ ಪರೀಕ್ಷೆಯನ್ನು ಮಾಡಿಸಿದ್ದೇವೆ. ಏಪ್ರಿಲ್ 10 ರಂದು ವರದಿ ಬಂದಾಗ, ಕೊರೋನಾ ಪಾಸಿಟಿವ್ ಕಂಡು ಬಂದಿದೆ ಎಂದಿದ್ದಾರೆ.

ಜನರಿಗೆ ಮನವಿ ಮಾಡಿದ ರಾಹುಲ್, “ಈ ಬಾರಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನೀವು ಮನೆ ಬಿಟ್ಟಾಗಲೆಲ್ಲಾ ಮಾಸ್ಕ್ ಧರಿಸಿಯೇ ಹೊರಡಿ” ಎಂದು ಹೇಳಿದ್ದಾರೆ. “ಶೀಘ್ರದಲ್ಲೇ ನನ್ನ ಕೋವಿಡ್ ಟೆಸ್ಟ್ ನೆಗೆಟಿವ್ ಬರಲಿದೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ಎಲ್ಲರ ಪ್ರೀತಿ ಮತ್ತು ಒಡನಾಟಕ್ಕೆ ಹೃತ್ಪೂರ್ವಕ  ಧನ್ಯವಾದಗಳು” ಎಂದಿದ್ದಾರೆ. ಕೊರೋನಾ ಸೋಂಕನ್ನು ತಪ್ಪಿಸಲು ಮಾಸ್ಕ್ ಧರಿಸಿ, ಪದೇ ಪದೇ ಕೈ ತೊಳೆಯುವಂತೆ ರಾಹುಲ್ ಜನರಿಗೆ ಮನವಿ ಮಾಡಿದ್ದಾರೆ. ಜನರು ಕೆಲಸವಿಲ್ಲದೆ ಮನೆ ಬಿಟ್ಟು ಹೊರ ಹೋಗದಂತೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: