
ಮೈಸೂರು
ಏ.18 : ಕೃತಿಗಳ ಲೋಕಾರ್ಪಣೆ ಮತ್ತು ‘ಬಸವಾನುಭವ ಚಿಂತನೆ’ ಮಾಸಿಕ ಕಾರ್ಯಕ್ರಮ ಉದ್ಘಾಟನೆ
ಮೈಸೂರು,ಏ.15:- ಜಾಗತಿಕ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಘಟಕ ವತಿಯಿಂದ ಏ.18ರಂದು ಕೃತಿಗಳ ಲೋಕಾರ್ಪಣೆ ಮತ್ತು ‘ಬಸವಾನುಭವ ಚಿಂತನೆ’ ಮಾಸಿಕ ಕಾರ್ಯಕ್ರಮ ಉದ್ಘಾಟನೆಯು ಹೊಸಮಠದ ಶ್ರೀ ನಟರಾಜ ಸಭಾಂಗಣದಲ್ಲಿ ನಡೆಯಲಿದೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಶರಣ ಮಹಾದೇವಪ್ಪ ಮಾಹಿತಿ ನೀಡಿ ಹೊಸಮಠದ ಚಿದಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಬೇಲಿಮಠದ ಶಿವರುದ್ರ ಮಹಾಸ್ವಾಮಿಗಳು ಅಧ್ಯಕ್ಷತೆವಹಿಸಲಿದ್ದಾರೆ. ವೀರಶೈವ ಧರ್ಮವು 12ನೇ ಶತಮಾನಕ್ಕಿಂತ ಮುಂಚೆ ಅಸ್ತಿತ್ವದಲ್ಲಿತ್ತೇ? ಕೃತಿಯ ಕುರಿತು ಕುಂದೂರುಮಠದ ಡಾ.ಶರತ್ ಚಂದ್ರ ಮಹಾಸ್ವಾಮಿಗಳು ಮಾತನಾಡಲಿದ್ದಾರೆ. ಲಿಂಗಾಯತರು ಹಿಂದೂಗಳೇ? ಲಿಂಗಾಯತ ಧರ್ಮ ಮತ್ತು ಹಿಂದೂ ಧರ್ಮ-ಒಂದು ತೌಲನಿಕ ಅಧ್ಯಯನ ಕೃತಿಯ ಕುರಿತು ವಿಶ್ರಾಂತ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್ ಮಾತನಾಡಲಿದ್ದಾರೆ. ಲಿಂಗಾಯತ ಹೋರಾಟ ಪ್ರಶ್ನೆ-ಪರಿಹಾರ ಮತ್ತು ವೀರಶೈವ ಸಂಸ್ಕೃತ ಗ್ರಂಥಗಳು ಒಂದು ವಸ್ತುನಿಷ್ಠ ನೋಟ ಕೃತಿ ಕುರಿತು ಕಲಾವಿದ-ಲೇಖಕ ಎಲ್ ಶಿವಲಿಂಗಪ್ಪ ಮಾತನಾಡಲಿದ್ದು, ಆರ್ ಜಿ. ಚಿನ್ನಸ್ವಾಮಿ ಪ್ರಸಾದದ ದಾಸೋಹಿಗಳಾಗಿದ್ದಾರೆ ಎಂದರು. (ಕೆ.ಎಸ್,ಎಸ್.ಎಚ್)