ದೇಶಪ್ರಮುಖ ಸುದ್ದಿ

ಈ ವರ್ಷ ದೇಶದಲ್ಲಿ  ಸಾಮಾನ್ಯ  ಮಳೆಯ ಮುನ್ಸೂಚನೆ   

ದೇಶ(ನವದೆಹಲಿ)ಏ.16:- ಕೊರೋನಾ ಬಿಕ್ಕಟ್ಟಿನ ಮಧ್ಯೆ ದೇಶದಲ್ಲಿ ಈ ವರ್ಷ ಮಾನ್ಸೂನ್ ಸಾಮಾನ್ಯವಾಗಲಿದೆ. ಈ ಮುನ್ಸೂಚನೆಯನ್ನು ಹವಾಮಾನ ಇಲಾಖೆ ವರದಿ ಮಾಡಿದೆ. ಈ ವರ್ಷ ಮಳೆಯ ಪ್ರಮಾಣವು ಶೇಕಡಾ 96 ರಿಂದ 104 ರಷ್ಟು ಸಾಮಾನ್ಯ ಎಂದು ನಿರೀಕ್ಷಿಸಲಾಗಿದೆ. ಹವಾಮಾನ ಇಲಾಖೆ ಜೂನ್ ನಿಂದ ಸೆಪ್ಟೆಂಬರ್ ವರೆಗೆ ದೀರ್ಘಾವಧಿಯ ಅಂದಾಜುಗಳನ್ನು ಬಿಡುಗಡೆ ಮಾಡಿದೆ.

ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್  “ನೈಋತ್ಯ ಮಾನ್ಸೂನ್ ದೀರ್ಘಾವಧಿಯ ಸರಾಸರಿಗೆ ಅನುಗುಣವಾಗಿ ಶೇಕಡಾ 98 ರಷ್ಟು ಮಳೆಯಾಗುತ್ತದೆ. ಈ ಬಾರಿ ಮಾನ್ಸೂನ್ ಸಾಮಾನ್ಯವಾಗಲಿದೆ ಎಂದು   ಹೇಳಿದ್ದಾರೆ. ಇದು ದೇಶಕ್ಕೆ ಒಳ್ಳೆಯ ಸುದ್ದಿ ಮತ್ತು ಇದು ಕೃಷಿ ಕ್ಷೇತ್ರಕ್ಕೆ ಉತ್ತಮ ಫಲಿತಾಂಶವನ್ನು ನೀಡುತ್ತದೆ ಎನ್ನಲಾಗಿದೆ.  (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: