ಕರ್ನಾಟಕಪ್ರಮುಖ ಸುದ್ದಿ

ಏ.27-29 : ಹಾಸನದಲ್ಲಿ ಏರ್‍ಮನ್ ಹುದ್ದೆಗಳಿಗೆ ನೇಮಕಾತಿ ರ್ಯಾಲಿ

ಬೆಂಗಳೂರು: ಹಾಸನದಲ್ಲಿ ಏಪ್ರಿಲ್ 27 ರಿಂದ 29 ರವರೆಗೆ ಭಾರತೀಯ ವಾಯುಪಡೆಯ ಏರ್‍ಮನ್ ಹುದ್ದೆಗಳಿಗೆ ನೇಮಕಾತಿ ರ್ಯಾಲಿ ನಡೆಯಲಿದೆ.

ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ರ್ಯಾಲಿಯಲ್ಲಿ ಗ್ರೂಫ್ ವೈ ಟ್ರೇಡ್‍ಗಳ (ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‍ಟ್ರಕ್ಟರ್ , ಐಎಎಫ್ (ಪೊಲೀಸ್) ಏರ್‍ಮೆನ್ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ.

1997 ರ ಜುಲೈ 7 ರಿಂದ 2000 ದ ಡಿಸೆಂಬರ್ 20 ರ ನಡುವೆ ಜನಿಸಿದ ಕನಿಷ್ಠ 165 ಸೆಂ.ಮೀ. ಎತ್ತರದ ಕರ್ನಾಟಕ ರಾಜ್ಯದ ಅವಿವಾಹಿತ ಪುರುಷರು ಈ ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು.

ಅಭ್ಯರ್ಥಿಗಳು ಇಂಟರ್‍ಮೀಡಿಯೆಟ್/ಪಿಯುಸಿ/10+2 ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಕೇಂದ್ರ/ರಾಜ್ಯ ಶಿಕ್ಷಣ ಮಂಡಳಿಗಳು ಅನುಮೋದಿಸಿದ ಯಾವುದೇ ವಿಷಯಗಳಲ್ಲಿ ಕನಿಷ್ಠ ಶೇ 50 ರಷ್ಟು ಸರಾಸರಿ ಅಂಕ ಹಾಗೂ ಇಂಗ್ಲೀಷ್‍ನಲ್ಲಿ ಕನಿಷ್ಠ ಶೇ 50 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅರ್ಹ ಅಭ್ಯರ್ಥಿಗಳು ಪರೀಕ್ಷಾ ಸ್ಥಳದಲ್ಲಿ ಮೂಲ ಅಂಕಪಟ್ಟಿ ಮತ್ತು ಎಸ್‍ಎಸ್‍ಎಲ್‍ಸಿ ಪ್ರಮಾಣ ಪತ್ರ ಇಂಟರ್‍ಮೀಡಿಯೆಟ್/ಪಿಯುಸಿ/10+2 ಉತ್ತೀರ್ಣರಾದ ಕುರಿತ ಪ್ರಮಾಣ ಪತ್ರ ಮತ್ತು ಎಲ್ಲಾ ಪ್ರಮಾಣ ಪತ್ರಗಳ ನಾಲ್ಕು ದೃಢೀಕೃತ ಪ್ರತಿಗಳು ಮತ್ತು ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಬಣ್ಣದ 7 ಭಾವಚಿತ್ರಗಳೊಂದಿಗೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಾಯುಪಡೆಯ ವೆಬ್‍ಸೈಟ್ www.arimenselection.gov.in ಅಥವಾ 7, ಏರ್‍ಮೆನ್ ಸೆಲೆಕ್ಷನ್ ಸೆಂಟರ್, ನಂ 1, ಕಬ್ಬನ್ ರಸ್ತೆ, ಬೆಂಗಳೂರು – 560 001, ದೂರವಾಣಿ ಸಂಖ್ಯೆ 080 – 25592199, ಇ ಮೇಲ್ [email protected] ಇಲ್ಲಿ ಸಂಪರ್ಕಿಸಬಹುದು.  ಅಭ್ಯರ್ಥಿಗಳು ತಮ್ಮ ಸಮೀಪದ ಜಿಲ್ಲಾ ಉದ್ಯೋಗಾಧಿಕಾರಿಗಳನ್ನು ಸಹ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: