ಕರ್ನಾಟಕಪ್ರಮುಖ ಸುದ್ದಿ

ಕೋವಿಡ್ ಸೋಂಕು ದೃಢಪಟ್ಟವರಿಗೆ ಇಂದಿನಿಂದ ಸೀಲ್ ಹಾಕುವ ಕಾರ್ಯ

ರಾಜ್ಯ( ಬೆಂಗಳೂರು)ಏ.17:- ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದೆ. ಕೋವಿಡ್ ಸೋಂಕು ದೃಢಪಟ್ಟವರಿಗೆ ಇಂದಿನಿಂದಲೇ ಮೊಹರು (ಸೀಲ್) ಹಾಕುವ ಕಾರ್ಯವನ್ನು ಪ್ರಾರಂಭಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.

ಬಿಬಿಎಂಪಿಯ ಎಂಟು ವಲಯಗಳಲ್ಲಿ ಕೋವಿಡ್‌ ಸಿದ್ಧತೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು ಸೀಲ್‌ ಹಾಕಲು ಬೇಕಾದ ಶಾಯಿ(ಇಂಕ್)ಯನ್ನು ಎಲ್ಲ ವಲಯಗಳಿಗೂ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಮುಖ್ಯ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಡಬೇಕಿರುವ ಹಾಸಿಗೆ ಸಾಮರ್ಥ್ಯವನ್ನು ಇನ್ನೂ ಹೆಚ್ಚಳವಾಗುವಂತೆ ಕ್ರಮವಹಿಸಬೇಕು. ಬೂತ್ ಮಟ್ಟದ ತಂಡಗಳ ಕಾರ್ಯನಿರ್ವಹಣೆಯನ್ನು ಸಕ್ರಿಯವಾಗಿಸಿ ಸಂಪರ್ಕ ಪತ್ತೆ ಕಾರ್ಯ ಸರಿಯಾಗಿ ಮಾಡಬೇಕು, ಎಲ್ಲ ವಲಯಗಳಲ್ಲಿಯೂ ಕಂಟೈನ್‌ಮೆಂಟ್‌ ಝೋನ್‌ ಒಂದೇ ಮಾದರಿಯಲ್ಲಿರಬೇಕು ಎಂದೂ ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: