ಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ನಟ ರಾಜೇಶ್ ಖಟ್ಟರ್ ಗೆ ಕೊರೋನಾ ಸೋಂಕು : ಆಸ್ಪತ್ರೆಗೆ ದಾಖಲು

ದೇಶ(ಮುಂಬೈ)ಏ.17:-  ಡಾನ್,  ಡಾನ್ 2 , ರೇಸ್ 2,’ ಖಿಲಾಡಿ 786, ಮಂಜುನಾಥ್,’ ಟ್ರಾಫಿಕ್ ‘ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದ ನಟ ರಾಜೇಶ್ ಖಟ್ಟರ್ ಅವರಿಗೆ ಕೊರೋನಾ ವೈರಸ್‌ ಸೋಂಕು ತಗುಲಿದೆ.

ಕೊರೋನಾ ಸೋಂಕಿಗೆ   ರಾಜೇಶ್ ಖಟ್ಟರ್ ಅವರನ್ನು ಗಾಜಿಯಾಬಾದ್‌ನ ಕೌಶಾಂಬಿಯ ಯಶೋದಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ರಾಜೇಶ್ ಖಟ್ಟರ್ ಗೆ ಅಧಿಕ ರಕ್ತದೊತ್ತಡವಿದ್ದು,  ಜ್ವರ, ಉಸಿರಾಟದ ತೊಂದರೆ, ಗಂಟಲು ನೋವಿನಿಂದ ಬಳಲುತ್ತಿರುವ  ಕಾರಣ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಯಲ್ಲಿದ್ದಾರೆ ಎಂದು ಕೌಶಾಂಬಿಯ ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅವರ ಮೇಲೆ ಹಿರಿಯ ವೈದ್ಯ ಡಾ.ಎ. ಪಿ. ಸಿಂಗ್ ಮತ್ತು ಇತರ 5 ಮಂದಿ ಇರುವ ವೈದ್ಯರ ತಂಡ ನಿಗಾವಹಿಸುತ್ತಿದೆ.

ಡಾ. ಅಗರ್ವಾಲ್  ಪ್ರತಿಕ್ರಿಯಿಸಿ ರಾಜೇಶ್ ಖಟ್ಟರ್ ಅವರಿಗೆ ಕೋವಿಡ್ ಪ್ರೋಟೋಕಾಲ್ ಪ್ರಕಾರ ಆಂಟಿ ವೈರಲ್ ಥೆರಪಿ ನೀಡಲಾಗುತ್ತಿದೆ. ಈ ನಡುವೆ ಅವರಿಗೆ ಆಮ್ಲಜನಕವನ್ನು ಸಹ ನೀಡಲಾಗುತ್ತಿದೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: