ಮೈಸೂರು

ಮೇ 1: ಮೃಗಾಲಯದಲ್ಲಿ ಬೇಸಿಗೆ ಶಿಬಿರ ಪ್ರಾರಂಭ

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ವಿದ್ಯಾರ್ಥಿಗಳಿಗೆ ಮೇ 1 ರಿಂದ 17 ರವರೆಗೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.

6 ನೇ ತರಗತಿಯಿಂದ ಮತ್ತು ಪದವಿ ಪೂರ್ವ ಶಿಕ್ಷಣದವರೆಗೆ ಪರೀಕ್ಷೆ ಬರೆದವರಿಗೆ ಶಿಬಿರ ಆಯೋಜನೆ ಮಾಡಲಾಗಿದೆ.  ಪ್ರತಿದಿನ ಬೆಳಿಗ್ಗೆ 9.30 ರಿಂದ ಸಂಜೆ 4.30 ರವರೆಗೆ ನಡೆಯುವ ಈ ಶಿಬಿರವನ್ನು 2 ತಂಡಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮೊದಲ ತಂಡದ ಶಿಬಿರ ಮೇ 1 ರಿಂದ 8 ರವರೆಗೆ, 2 ನೇ ತಂಡದ ಶಿಬಿರ ಮೇ.10 ರಿಂದ 17 ರವರೆಗೆ ನಡೆಯಲಿದೆ. 100 ಮಂದಿಗೆ ಮಾತ್ರ ಅವಕಾಶವಿರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಪ್ರಕೃತಿ ಮತ್ತು ವನ್ಯಪ್ರಾಣಿ ಸಂಕುಲಗಳ ಸಂರಕ್ಷಣೆ ಹಾಗೂ ಜೈವಿಕ ವೈವಿಧ್ಯತೆಗಳು ಈ ಶಿಬಿರದ ಮುಖ್ಯ ಅಂಶಗಳಾಗಿವೆ. ವಿದ್ಯಾರ್ಥಿಗಳು ಶಿಬಿರದ ಅವಧಿಯಲ್ಲಿ ಕಾರಂಜಿಕೆರೆ ಹಾಗೂ ಪ್ರಾಚ್ಯ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವುದು, ಅಲ್ಲಿನ ಪಕ್ಷಿ ವೀಕ್ಷಣೆ, ಮರ-ಗಿಡ ಗುರುತಿಸುವುದು, ಪ್ರಾಣಿಗಳ ವರ್ತನೆಗಳ ಅಧ್ಯಯನಗಳು ಶಿಬಿರದ ವಿಷಯಗಳಾಗಿರುತ್ತವೆ. ಶಿಬಿರದ ಸದಸ್ಯತ್ವ ಪಡೆಯುವವರಿಗೆ ಅಗತ್ಯವಿರುವ ಅರ್ಜಿಗಳನ್ನು ಏ.21 ರಿಂದ ವಿತರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0821-2523020, 2440752 ಗೆ ಸಂಪರ್ಕಿಸಬಹುದಾಗಿದೆ. (ಎಲ್.ಜಿ)

Leave a Reply

comments

Related Articles

error: