ಮನರಂಜನೆಮೈಸೂರು

ಏ.28 : ‘ಪೊರ್ಕಿ ಹುಚ್ಚ ವೆಂಕಟ್ ಚಿತ್ರ ಬಿಡುಗಡೆ : ಮುಂದೊಂದು ದಿನ ಪ್ರಧಾನಿಯಾಗುವೆ ಎಂದ ಹುಚ್ಚ ವೆಂಕಟ್

ಸಿನಿಮಾ ಇಲ್ಲದೇನೇ ನಾನು ಹೀರೋ. ಹುಚ್ಚ ವೆಂಕಟ್ ಸೇನೆ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಲಿದ್ದು ಮುಂದೊಂದು ದಿನ ನಾನು ಪ್ರಧಾನಿಯಾಗುವೆ. ತಪ್ಪು ಮಾಡುವ ಕಾರ್ಯಕರ್ತರ ಕೈಕಾಲು ಮುರಿಯುವೇ  ಎನ್ನುವ ಆವೇಶಭರಿತ ಪಂಚಿಂಗ್ ಡೈಲಾಗ್ ಗಳ ಮೂಲಕವೇ ಸುದ್ದಿಗಾರರೊಂದಿಗೆ ಮಾತನಾಡಿದ್ದು ಚಲನಚಿತ್ರ ನಟ ಹುಚ್ಚ ವೆಂಕಟ್.

ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಂ ಬ್ಯಾನರ್ ನಡಿ ನಿರ್ಮಿಸಿದ, ಹುಚ್ಚ ವೆಂಕಟ್ ನಿರ್ದೇಶನದಲ್ಲಿ, ನಾನೇ ನಾಯಕ ನಟನಾಗಿ ಅಭಿನಯಿಸಿರುವ’ ‘ಪೊರ್ಕಿ ಹುಚ್ಚ ವೆಂಕಟ್’ ಸಿನಿಮಾವು ಇದೇ ಏ.28ರಂದು ಮೈಸೂರಿನ ಸತ್ಯಂ ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ.  ಚಿತ್ರ ನನ್ನ ಜೀವನದ ನೈಜ ಘಟನೆಯಾಧಾರಿತವಾಗಿದೆ. ಸಿನಿಮಾವು ಸಮಾಜವನ್ನು ಬದಲಿಸುವ ಶಕ್ತಿಯನ್ನು ಹೊಂದಿದ್ದು ಕೇವಲ ಬುದ್ದಿವಾದವನ್ನು ಹೇಳಿಲ್ಲ ಬದಲಿಗೆ ಪ್ರೀತಿಯೆಂದರೇನು?  ಎನ್ನುವ ನವಿರಾದ ದೃಶ್ಯಗಳು, ಪಂಚಿಂಗ್ ಡೈಲಾಗ್ ಗಳನ್ನು ಒಳಗೊಂಡಿದೆ ಎಂದು ತಿಳಿಸಿದರು. ಕೇವಲ ಶಿಳ್ಳೆ ಚಪ್ಪಾಳೆಗಳಿಗಾಗಿ ಪಂಚಿಂಗ್ ಡೈಲಾಗ್ ಗಳಿಲ್ಲ ಅವುಗಳನ್ನು ಸೂಕ್ತವಾಗಿ ಅರ್ಥೈಸಿಕೊಳ್ಳಬೇಕು. ಕನ್ನಡ ಸಿನಿಮಾ ನೋಡಿ ಬೆನ್ನು ತಟ್ಟಿ ಎಂದು ಕೋರಿದರು.

ಕಟ್ಟಪ್ಪನನ್ನು ಕ್ಷಮಿಸಿ : ಬಹಿರಂಗವಾಗಿ ಕ್ಷಮೆಯಾಚಿಸಿರುವ ಬಾಹುಬಲಿ ಚಿತ್ರದ ಪಾತ್ರದಾರಿ ಕಟ್ಟಪ್ಪ ಸತ್ಯರಾಜ್ ಅವರನ್ನು ಕನ್ನಡಿಗರು ವಿಶಾಲ ಮನಸ್ಸಿನಿಂದ ಒಂದು ಬಾರಿ ಕ್ಷಮಿಸೋಣ. ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಅಡ್ಡಿಯೆಸಗಿದರೆ ರಾಜ್ಯದಲ್ಲಿಯೂ ತಮಿಳು ಸಿನಿಮಾವನ್ನು ನಡೆಸಲು ಬಿಡುವುದಿಲ್ಲವೆಂದು ಬಿರುಸಿನ ನುಡಿಗಳಾಡಿ, ಕಾವೇರಿಯನ್ನು ರಾಜಕೀಯ ವ್ಯಕ್ತಿಗಳು ತಮ್ಮ ಸ್ವಹಿತಕ್ಕಾಗಿ ಬಳಸಿಕೊಳ್ಳುತ್ತಿದ್ದು ಅಂತಹವರಿಂದ ಅಂತರವನ್ನು ಕಾಯ್ದುಕೊಳ್ಳಬೇಕೇ ಹೊರತು ಭಾಷೆಯಿಂದಲ್ಲ. ನಾನು ಯಾರಿಗೂ ಪ್ರತಿಸ್ಪರ್ಧಿಯಲ್ಲ. ಹುಚ್ಚ ವೆಂಕಟ್ ಕನ್ನಡಿಗ ನನ್ನ ಸಿನಿಮಾ ಕರ್ನಾಟಕದಲ್ಲಿಯೇ ಬಿಡುಗಡೆಗೊಳ್ಳುವುದು ಎಲ್ಲಾ ಕನ್ನಡಿಗರು ಮೆಚ್ಚಿ ಅಶೀರ್ವದಿಸುವರು ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ರಾಜ್ಯದಲ್ಲಿ 35 ಸಾವಿರ ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಕಡ್ಡಾಯಗೊಳಿಸಿ ಸರ್ಕಾರದ ನೌಕರರನ್ನಾಗಿ ಪರಿಗಣಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೋರಿ ಸರ್ಕಾರ ಈ ಬಗ್ಗೆ ಅವಲೋಕಿಸಬೇಕೆಂದು ಆಗ್ರಹಿಸಿದರು. ಸಾರ್ವಜನಿಕ ಆಸ್ತಿಯೂ ಖಾಸಗಿ ಒಡೆತನದಲ್ಲಿರಬಾರದು. ಅದು ಸಾರ್ವಜನಿಕರ ಸ್ವತ್ತಾಗಬೇಕೆಂದು, ನಮ್ಮ ಭೂಮಿ ನಮಗೆ ಸೇರಬೇಕೆನ್ನುವ ಸಿದ್ಧಾಂತ ನನ್ನದು ಎಂದರು. ರಾಜ್ಯದಲ್ಲಿ ಪದೇ ಪದೇ ಬಂದ್ ನಡೆಸುವುದರಿಂದ ಬಡ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆದಂತಾಗುವುದು, ಆದ್ದರಿಂದ ಯಾವುದೇ ಕಾರಣಕ್ಕೆ ಬಂದ್ ನಡೆಸಬಾರದು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪೊರ್ಕಿ ಹುಚ್ಚ ವೆಂಕಟ್ ಚಿತ್ರದ ನಾಯಕಿ ರಚನಾ ಹಾಗೂ ಸೇನೆಯ ಕಾರ್ಯಕರ್ತರು ಹಾಜರಿದ್ದರು.  (ಕೆ.ಎಂ.ಆರ್)

Leave a Reply

comments

Related Articles

error: