ಕರ್ನಾಟಕಪ್ರಮುಖ ಸುದ್ದಿಮೈಸೂರು

ಹೊಸಪೇಟೆಯ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿದ ಎಲ್.ಆರ್. ಮಹದೇವಸ್ವಾಮಿ

ಮೈಸೂರು,ಏ.17:-  ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎಲ್.ಆರ್. ಮಹದೇವಸ್ವಾಮಿ ಶನಿವಾರ   ಹೊಸಪೇಟೆಯ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃಗಾಲಯದ ಅಧಿಕಾರಿಗಳು ಸಿಬ್ಬಂದಿ ವರ್ಗದೊಂದಿಗೆ ನೂತನ ಹವಾನಿಯಂತ್ರಿತ ಬಸ್ಸಿನಲ್ಲಿ ಹುಲಿ ಮತ್ತು ಸಿಂಹದ ಸಫಾರಿ ಮಾಡಿದರು. ಬೇಸಿಗೆಯಲ್ಲಿ ಪ್ರಾಣಿಗಳಿಗೆ ಮಾಡುತ್ತಿರುವ ವಿಶೇಷ ಆರೈಕೆ, ಫಾಗರ್ ಅಳವಡಿಕೆ, ಸ್ಪಿಂಕ್ಲರ್ ನೀರು ಸಿಂಪಡಣೆ ಕುರಿತು ಮೃಗಾಲಯದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂಎನ್ ಕಿರಣ್ ಕುಮಾರ್ ಅವರು ಮಾಹಿತಿ ನೀಡಿದರು.

ಬಳಿಕ ಮಹಾದೇವ ಸ್ವಾಮಿಯವರು ಚಿರತೆ, ಕರ,ಡಿ ಕತ್ತೆಕಿರುಬ ಸೇರಿದಂತೆ ಇತರ ಪ್ರಾಣಿಗಳಿಗೆ ಅಳವಡಿಸಿರುವ ಬೇಸಿಗೆಯ ನೀರು ಹಾಕುವ ಯಂತ್ರಗಳನ್ನು ಪರಿಶೀಲಿಸಿದರು. ಮೃಗಾಲಯದ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ನಂತರ ಮೃಗಾಲಯದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿ ಪ್ರವೇಶದ್ವಾರದ ಕಾಮಗಾರಿ ಕರಡಿ ಚಿರತೆ ಯ ಪುನರ್ವಸತಿ ಕೇಂದ್ರಗಳ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.
ಬಳಿಕ ಮಾತನಾಡಿ ನವೆಂಬರ್ ನಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಅಂದಿನಿಂದ ಇದುವರೆಗೆ ಬನ್ನೇರು ಘಟ್ಟ, ಬೆಳಗಾಂ, ಹಂಪಿ ಮೃಗಾಲಯಗಳಿಗೆ ಭೇಟಿ ನೀಡಿ ಅಭಿವೃದ್ಧಿಗಳನ್ನು ಹಾಗೂ ಅಲ್ಲಿನ ಕಾರ್ಯ ವೈಖರಿಗಳನ್ನು ಪರಿಶೀಲನೆ ನಡೆಸಿರುದ್ದೇನೆ. ಮೈಸೂರು ಮೃಗಾಲಯ ದೊಂದಿಗೆ ಎಲ್ಲಾ ರೀತಿಯಲ್ಲೂ ಸ್ಪರ್ಧಿಸುವಂತೆ ಹಂಪಿಯ ಮೃಗಾಲಯವು ಬೆಳೆಯುತ್ತಿರುವುದು ಸಂತೋಷದ ಸಂಗತಿ. ಹಂಪಿ ಮೃಗಾಲಯ 350 ಎಕರೆ ವಿಸ್ತೀರ್ಣ ಹೊಂದಿದ ರಾಜ್ಯದ 9 ಮೃಗಾಲಯಗಳಿಗೆ ಸಮಾನ ಆದ್ಯತೆ ನೀಡಿ ಬೆಳೆಸಲಾಗುವುದು. ಬಳ್ಳಾರಿ ವಿಜಯನಗರ ಜಿಲ್ಲೆಯಲ್ಲಿ ಸಾಕಷ್ಟು ಬಿಸಿಲು ಇರುತ್ತದೆ. ಇಂತಹ ಪ್ರತಿಕೂಲ ಹವಾಮಾನದಲ್ಲೂ ಹಂಪಿ ಮೃಗಾಲಯದಲ್ಲಿ 9000 ಗಿಡಗಳನ್ನು ಬೆಳೆಸಿದ್ದಾರೆ. ಈ ಮೃಗಾಲಯಕ್ಕೆ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಯಿಂದ ನೀರು ಪಡೆಯಲು ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ಅದು ಪೂರ್ಣಗೊಂಡರೆ ಇಡೀ ಉದ್ಯಾನ ಹಸಿರಿನಿಂದ ಕಂಗೊಳಿಸಲಿದೆ. ಆ ನೀರಿನಿಂದ ಮೃಗಾಲಯದಲ್ಲಿರುವ ಕೆರೆಕಟ್ಟೆ ತುಂಬಿಸಿ, ,ಅಂತರ್ಜಲ ಹೆಚ್ಚಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಎಲ್ಲಾ ಮೃಗಾಲಯಗಳಿಗೆ ರಾಜ್ಯ ಸರ್ಕಾರವು 30 ಕೋಟಿ ರೂಗಳನ್ನು   ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು, ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿಯವರ ಶ್ರಮದಿಂದ ಬಿಡುಗಡೆಯಾಗಿದ್ದು ಮೃಗಾಲಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕೋವಿಡ್ ಸಂಕಷ್ಟದಿಂದ ಮೃಗಾಲಯಗಳ ಆದಾಯವು ಕುಂಠಿತವಾಗಿದೆ. ಹಾಗಾಗಿ ಇಲ್ಲಿನ ಜನರು , ಉದ್ಯಮಿಗಳು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಮೃಗಾಲಯ ಹಾಗೂ ಪ್ರಾಣಿಗಳ ನಿರ್ವಹಣೆಗೆ ಸಹಕರಿಸಬೇಕು ಎಂದು ಕೇಳಿಕೊಂಡರು.
ಮೃಗಾಲಯದಲ್ಲಿ ದನದ ಮಾಂಸದ ಬದಲಾಗಿ ಮಾಂಸಾಹಾರಿ ಪ್ರಾಣಿಗಳಿಗೆ ಕೋಳಿಮಾಂಸವನ್ನು ನೀಡಲಾಗುತ್ತಿದೆ. ಗೋಹತ್ಯೆ ನಿಷೇಧ ಮಾಡಿದ್ದು ನಮ್ಮ ಸರ್ಕಾರ. ಇದು ಹೆಮ್ಮೆಯ ವಿಷಯ. ನಮ್ಮಮೃಗಾಲಯ ಪ್ರಾಣಿಗಳು ಕೋಳಿ ಮಾಂಸಕ್ಕೆ ಹೊಂದಿಕೊಂಡಿದೆ. ಹಾಗಾಗಿ ಯಾವುದೇ ಸಮಸ್ಯೆಯೂ ಇಲ್ಲ
ಇಲ್ಲಿನ ಸಚಿವರಾದ   ಆನಂದ್ ಸಿಂಗ್ ಅವರು ಮೃಗಾಲಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು ನಮ್ಮ ಸಿಬ್ಬಂದಿಯು ಕೂಡ ಉತ್ತಮವಾದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಂಪಿಯು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು ಮುಂದಿನ ದಿನಗಳಲ್ಲಿ ನಮ್ಮ ಮೃಗಾಲಯವು ಉತ್ತಮ ಪ್ರವಾಸಿ ತಾಣವಾಗಲಿದೆ ಎಂದರು.
ಈ ಸಂದರ್ಭ  ಕಿರಣ್ ಕುಮಾರ್ ಎಸಿಎಫ್ ಮಂಜುನಾಥ್ ಆರ್ ಎಫ್ ಒ  ರಮೇಶ್, ಡಿಆರ್ ಎಫ್ ಓ ಪರಮೇಶ್ವರಯ್ಯ,   ಜಸ್ವಂತ್ ಹಾಗೂ ರಾಘವೇಂದ್ರ, ಸತ್ಯ, ಗಿರಿ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: