ಮೈಸೂರು

ಬೀಡಿ ಸೇದಿ ಎಸೆದ ಪರಿಣಾಮ ಗ್ರಂಥಾಲಯಕ್ಕೆ ಬೆಂಕಿ : ಮಾಹಿತಿ ನೀಡಿದ ಡಾ.ಚಂದ್ರಗುಪ್ತ

ಮೈಸೂರು,ಏ.17:-  ವ್ಯಕ್ತಿಯೊಬ್ಬ ಬೀಡಿ ಸೇದಿ ಎಸೆದ ಪರಿಣಾಮ ಬೆಂಕಿ ಅನಾಹುತ ಸಂಭವಿಸಿದೆ ಎಂದು ಸೈಯದ್ ಇಸಾಕ್ ಸಾರ್ವಜನಿಕ ಗ್ರಂಥಾಲಯಕ್ಕೆ ಬೆಂಕಿ ಪ್ರಕರಣ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ಇಸಾಕ್ ಸಾರ್ವಜನಿಕ ಗ್ರಂಥಾಲಯ ಸುಟ್ಟು ಹೋದ ಹಿನ್ನೆಲೆ, ಘಟನೆಯ ಹಿಂದೆ ದುರುದ್ದೇಶಗಳಿರಬಹುದು ಎನ್ನವ ಊಹಾಪೋಹಗಳು ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲೇ ವಿಡಿಯೋವೊಂದನ್ನು ತೋರಿಸುವ ಮೂಲಕ ವ್ಯಕ್ತಿಯೊಬ್ಬ ಬಿಡಿ ಸೇದಿ ಎಸೆದ ಪರಿಣಾಮ ಬೆಂಕಿ ಅನಾಹುತ ಸಂಭವಿಸಿದೆ ಎಂದು ವಿವರಿಸಿದ್ದಾರೆ.

ಘಟನೆ ಸಂಬಂಧಿಸಿದಂತೆ ಬಿಡಿ ಸೇದಿ ಎಸೆದ ವ್ಯಕ್ತಿಗೂ, ಸಯ್ಯದ್‌ ಅವರಿಗೂ ಏನಾದರೂ ವೈಷಮ್ಯ ಇತ್ತೇ ಎನ್ನುವ ಬಗ್ಗೆ ಇನ್ನುಮುಂದೆ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಕೊರೋನಾ ಪ್ರಕರಣ ಹೆಚ್ಚಳವಾಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಎಚ್ಚರಿಕೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: