ಮೈಸೂರು

ಕನ್ನಡ ಸಾಹಿತ್ಯ, ಸಂಸ್ಕೃತಿಯ ಪ್ರಗತಿಗೆ ಭೇರ್ಯ ರಾಮಕುಮಾರ್ ಅವರ ಕೊಡುಗೆ ಅಪಾರ : ಪ್ರೊ.ಕೆ.ಭೈರವಮೂರ್ತಿ

ಅಭಿನಂದನೆ

ಮೈಸೂರು,ಏ.18:-  ಸಾಹಿತ್ಯ ಸಂಘಟಕ,ಗ್ರಾಮಾಂತರ ಬುದ್ದಿಜೀವಿಗಳ ಬಳಗದ ಅಧ್ಯಕ್ಷ,ಹಿರಿಯ ಪತ್ರಕರ್ತ,ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಭೇರ್ಯ ರಾಮಕುಮಾರ್ ಅವರನ್ಙು ಅವರ 57 ನೇ ಜನ್ಮದಿನವಾದ ಇಂದು ಬೆಳಿಗ್ಗೆ ಹಿರಿಯ ಸಾಹಿತಿಗಳಾದ ಪ್ರೊ.ಕೆ.ಭೈರವಮೂರ್ತಿ ಅವರ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದಿಸಲಾಯಿತು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ವೈ
ಡಿ.ರಾಜಣ್ಣ,ಹಾಲಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಮಡ್ಡಿಕೆರೆ ಗೋಪಾಲ್,ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಚಂದ್ರಶೇಖರ್,ಪತ್ರಕರ್ತ ಮೈಸೂರು ರಂಗಣ್ಣ,ಹಿರಿಯ ರಂಗಕರ್ಮಿ ನಾ.ನಾಗಚಂದ್ರ,ಲೇಖಕ ನಾ.ಮಹಾವೀರಪ್ರಸಾದ್,ಎಂ.ಬಿ.ಸಂತೋಷ್ ,ಕನ್ನಡ ಪರ ಚಿಂತಕ ಅರವಿಂದ್ ಶರ್ಮಾ ಅವರು ಭೇರ್ಯ ರಾಮಕುಮಾರ್ ಅವರನ್ನು ಸನ್ಮಾನಿಸಿ ಶುಭಹಾರೈಸಿದರು.

ಹಿರಿಯ ಸಾಹಿತಿಗಳಾದ ಪ್ರೊ.ಕೆ.ಭೈರವಮೂರ್ತಿ ಅವರು ಮಾತನಾಡಿ ಕನ್ನಡ ಸಾಹಿತ್ಯ, ಸಂಸ್ಕೃತಿಯ ಪ್ರಗತಿಗೆ ಭೇರ್ಯ ರಾಮಕುಮಾರ್ ಅವರ ಕೊಡುಗೆ ಅಪಾರ.ಅವರೊಬ್ಬ ಕನ್ನಡ ನಾಡು-ನುಡಿ ಪ್ರಗತಿಗೆ ಶ್ರಮಿಸುತ್ತಿರುವ ಸಂತ ಎಂದು ಬಣ್ಣಿಸಿದರು. ಭೇರ್ಯ ರಾಮಕುಮಾರ್ ಅವರಿಗೆ ತಮ್ಮ ಪ್ರಧಾನ ಸಂಪಾದಕತ್ವದಲ್ಲಿ ಸದ್ಯದಲ್ಲಿಯೇ ಅಭಿನಂದನಾ ಗ್ರಂಥವೊಂದನ್ನು ಹೊರತರಲು ,
ಆ ಮೂಲಕ ಅವರ ಕನ್ನಡ ನಾಡು-ನುಡಿ ಸೇವೆಯನ್ನು ಗೌರವಿಸಲು ಯೋಜಿಸಿರುವುದಾಗಿ ಈ ಸಂದರ್ಭದಲ್ಲಿ ಭೈರವಮೂರ್ತಿ ಅವರು ಪ್ರಕಟಿಸಿದರು.

ಡಾ.ವೈ.ಡಿ ರಾಜಣ್ಣ ಮಾತನಾಡಿ ಅಂದಿನ ದಿನ ಮಾನಸದಲ್ಲೇ ಉದಯೋನ್ಮುಖರನ್ನು ಗುರುತಿಸಿ ಸನ್ಮಾನಿಸಿ ಹಲವರಿಗೆ ವೇದಿಕೆ ಕಲ್ಪಿಸಿದ್ದಾರೆ ಅವರ ಸಂಸ್ಥೆ ಇಂದ ಪ್ರಶಸ್ತಿ ಪಡೆದವರಲ್ಲಿ ನಾನು ಒಬ್ಬ ಎಂದು ಹೇಳಲು ಹೆಮ್ಮೆ ಎಂದು ನುಡಿದರು.

ಮಡ್ಡೀಕೆರೆ ಗೋಪಾಲ್ ಅವರು ಮಾತನಾಡಿ ಭೇರ್ಯ ರಾಮಕುಮಾರ್ ಕನ್ನಡ ‌ಸಾಹಿತ್ಯ ಕ್ಷೇತ್ರದ ಜಂಗಮ ರಂತೆ ಕೆಲಸ ಮಾಡಿದ್ದಾರೆ ಪುಸ್ತಕ ಪ್ರಕಟಣೆ ಹಿರಿಯ ಕವಿಗಳ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಮಾಡುವ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದಾರೆ ಎಂದು ಬಣ್ಣಿಸಿದರು.

ಎಂ ಚಂದ್ರಶೇಖರ್ ಅವರು ಮಾತನಾಡಿ ಹಿಂದಿನ ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದಿರುವ ಹಲವಾರು ಲೇಖಕ-ಲೇಖಕಿಯರಿಗೆ ಪ್ರಥಮ ವೇದಿಕೆ ಕಲ್ಪಿಸಿದ ಹೆಗ್ಗಳಿಕೆ ಇವರದು ಎಂದು ನುಡಿದು ತಾವು ಕನ್ನಡ ಸಾಹಿತ್ಯ ಕಲಾಕೂಟ ಸಂಸ್ಥೆ ರಚಿಸಲು‌ ಭೇರ್ಯ ರಾಮಕುಮಾರ್ ಅವರ ಸಾಹಿತ್ಯ ಸೇವೆಯೇ ಪ್ರೇರಣೆ ಎಂದು ನುಡಿದರು

ರಂಗನಾಥ್ ಮೈಸೂರು ಮಾತನಾಡಿ ತಮ್ಮ ಪ್ರಥಮ ಕವಿಗೋಷ್ಠಿಗಳು ಭೇರ್ಯ ರಾಮಕುಮಾರ್ ಸಂಸ್ಥೆಯದು ಇವರ ಸೇವಾ ಗುಣವನ್ನು ಬೆಂಬಲಿಸುವ ಪತ್ನಿ ಹಾಗೂ ಪುತ್ರಿ ಇದ್ದಾರೆ ಇದು ಸಂತಸದ ವಿಚಾರ ಎಂದು ನುಡಿದರು.

ನಾ.ನಾಗಚಂದ್ರ ಅವರು ಮಾತನಾಡಿ ಗ್ರಾಮೀಣ ರಂಗ ಭೂಮಿ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಇವರ ನಾಲ್ಕು ದಶಕಗಳ ಕಾರ್ಯ ಮೆಚ್ಚಿಗೆಯಾಗುವಂತದ್ದು ಎಂದು ನುಡಿದರು

ನಾ.ಮಹಾವೀರ್ ಪ್ರಸಾದ್ ಮಾತನಾಡಿ ಪತ್ರಕರ್ತರಾಗಿ ರಾಮಕುಮಾರ್ ಸೇವೆ ಮಹತ್ವದ್ದು ಎಂದು ನುಡಿದರು

ಎಂ.ಬಿ ಸಂತೋಷ್ ಮಾತನಾಡಿ ತಾವು ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ರಾಮಕುಮಾರ್ ಸಂಸ್ಥೆಯ ಪ್ರಭಾವವೇ ಕಾರಣ ಎಂದು ನುಡಿದರು.

ಅರವಿಂದ್ ಶರ್ಮ ಕನ್ನಡ ಕಟ್ಟುವ ಕೆಲಸ ಮಾಡುವ ಯುವ ಜನತೆಗೆ ಇಂತವರ ಸಾಧನೆಗಳು ಸ್ಪೂರ್ತಿ ನೀಡುತ್ತದೆ ಎಂದು ಶ್ಲಾಘಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: